ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆಯಲಿದೆ:ಅಬ್ದುಲ್ ಅಜೀಂ
Update: 2017-11-01 23:43 IST
ಮದ್ದೂರು, ನ.1: ಪಟ್ಟಣಕ್ಕೆ ಬುಧವಾರ ಭೇಟಿ ನೀಡಿದ ಬಿಜೆಪಿ ಜಿಲ್ಲಾ ಉಸ್ತುವಾರಿ ಮುಖ್ಯಸ್ಥ ಅಬ್ದುಲ್ ಅಜೀಂ ಬೆಂಗಳೂರಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಗೆ ಕಾರ್ಯರ್ತರನ್ನು ಸಜ್ಜಗೊಳಿಸುವಂತೆ ಮನವಿ ಮಾಡಿದರು.
ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಿಂದ ಒಂದೂವರೆ ಸಾವಿರ ಯುವಜನರು ಬೈಕ್ ರ್ಯಾಲಿ ಬೆಂಗಳೂರಿನ ತುಮಕೂರು ರಸ್ತೆಯವರೆಗೆ ಬೈಕ್ ರ್‍ಯಾಲಿಯಲ್ಲಿ ತೆರಳುವರು ಎಂದರು.
ಮುಂದಿನ 2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆಯುವುದು ನಿಶ್ಚಿತ. ಮುಂದಿನ ವರುಷ ಮದ್ದೂರಿನಲ್ಲಿ ಬಿಜೆಪಿ ಶಾಸಕರನ್ನು ಕಾಣುತ್ತಿರಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಲಕ್ಷ್ಮಣಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಪರಿಶಿಷ್ಟ ವಿಭಾಗ ಜಿಲ್ಲಾಧ್ಯಕ್ಷ ಕೆಂಪಬೋರಯ್ಯ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಂ.ಸಿ.ಸಿದ್ದು, ವೀರಭದ್ರಸ್ವಾಮಿ, ಗುರುಸಿದ್ದು, ಟೈರ್ ಗಿರೀಶ್ ,ಇತರರು ಭಾಗವಹಿಸಿದ್ದರು.