ಬೆಟ್ಟದಿಂದ ಬಿದ್ದು ಬಾಲಕ ಮೃತ್ಯು
Update: 2017-11-01 23:56 IST
ಗದಗ, ನ.1: ನರಗುಂದ ಪಟ್ಟಣದ ಐತಿಹಾಸಿಕ ಬೆಟ್ಟದ ಮೇಲಿನಿಂದ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ನರಗುಂದ ಪಟ್ಟಣದ 2ನೆ ನಂಬರ್ ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಮಲ್ಲಪ್ಪ ಗಡೇಕರ್ (10) ಮೃತ ಬಾಲಕ. ಬೆಟ್ಟದ ಮೇಲಿನ ಸೀತಾಫಲ ಗಿಡದಿಂದ ಹಣ್ಣು ಕೀಳಲು ಗಿಡವೇರಿದಾಗ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.
ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.