×
Ad

ಗುಂಡ್ಲುಪೇಟೆ : ಬೋನಿಗೆ ಬಿದ್ದ ಚಿರತೆ

Update: 2017-11-02 16:56 IST

ಗುಂಡ್ಲುಪೇಟೆ,ನ.2: ತಾಲೂಕಿನ ಹಕ್ಕಲಪುರ ಗ್ರಾಮದಲ್ಲಿ ರೈತರಿಗೆ ತೊಂದರೆ ಕೊಡುತ್ತಿದ್ದ ಚಿರತೆಯನ್ನು ಸೆರೆಹಿಡಿದು ಅರಣ್ಯಪ್ರದೇಶಕ್ಕೆ ಬಿಡಲಾಗಿದೆ. 

ಗ್ರಾಮದ ಹೊರವಲಯದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆಯೊಂದು ಸಂಚರಿಸುತ್ತಿದ್ದು ರೈತರ ಆತಂಕಕ್ಕೆ ಕಾರಣವಾಗಿತ್ತು. ಇದರಿಂದ ರೈತರು ತಮ್ಮ ಜನೀನುಗಳಿಗೆ ತೆರಳಲು ಹೆದರುತ್ತಿದ್ದರು.

ಚಿರತೆಯ ಹೆಜ್ಜೆಯ ಗುರುತುಗಳನ್ನು ನೋಡಿದ ಅರಣ್ಯ ಇಲಾಖೆಯು ಚಿರತೆಯ ಸೆರೆಗೆ ಬುಧವಾರ ಗ್ರಾಮದ ಸ್ವಾಮಿ ಎಂಬುವರ ಜಮೀನಿನಲ್ಲಿ ಬೋನು ಅಳವಡಿಸಿ ಒಳಗೆ ನಾಯಿಯನ್ನು ಕಟ್ಟಿಹಾಕಿದ್ದರು. ಬುಧವಾರ ಮಧ್ಯರಾತ್ರಿ ನಾಯಿಯನ್ನು ತಿನ್ನಲು ಬಂದ 6 ವರ್ಷದ ಗಂಡು ಚಿರತೆಯು ಬೋನಿನಲ್ಲಿ ಸೆರೆಯಾಗಿದೆ. 

ಕೂಡಲೇ ಅರಣ್ಯ ಇಲಾಖೆಯ ಗಮನಕ್ಕೆ ತರಲಾಯಿತು.ಚಿರತೆಯನ್ನು ಮೂಲೆಹೊಳೆ ವಲಯದ ಮಾಡ್ರಕಟ್ಟೆಯ ಬಿಡಲಾಯಿತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News