ವಂಚನೆ ಪ್ರಕರಣ : ಇಬ್ಬರ ಬಂಧನ
Update: 2017-11-02 22:24 IST
ಮದ್ದೂರು, ನ.2: ನಕಲಿ ಚಿನ್ನದ ಕಮಂಡಲ ನೀಡಿ ವ್ಯಕ್ತಿಯೊಬ್ಬರನ್ನು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಬಿಡದಿ ನಿವಾಸಿ ಮುತ್ತುರಾಜು ಹಾಗು ಕನಕಪುರ ತಾಲೂಕಿನ ಕಳ್ಳಹಳ್ಳಿ ಗ್ರಾಮದ ಸಿದ್ದರಾಜು ಬಂಧಿತರು. ಇವರು ಬೆಂಗಳೂರಿನ ಬಿಡದಿ ನಿವಾಸಿ ಸತೀಶ್ ಎಂಬುವರಿಗೆ ನಕಲಿ ಚಿನ್ನದ ಕಮಂಡಲ ನೀಡಿ ವಂಚಿಸಿದ್ದರು.
ಈ ವಿಷಯವಾಗಿ ಅ.26ರಂದು ಪಟ್ಟಣದ ಮದ್ದೂರಮ್ಮ ದೇಗುಲದ ಬಳಿ ಸತೀಶ್ ಅವರೊಂದಿಗೆ ಗಲಾಟೆ ಮಾಡುತ್ತಿದ್ದಾಗ ಪೊಲೀಸರು ಈ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.
ಗುರುವಾರ ಸಂಜೆ ಬಂಧಿತರನ್ನು ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಲಾಗಿದೆ.