ತುಮಕೂರು ವಿ.ವಿ.ಗೆ ಫ್ರೆಂಚ್ ವಿಜ್ಞಾನಿ ಭೇಟಿ
ತುಮಕೂರು,ನ.02:ಫ್ರಾನ್ಸ್‍ನ ಯೂನಿವರ್ಸಿಟಿ ಆಫ್ ರೊಯೆನ್‍ನ ಹಿರಿಯ ಪ್ರಾಧ್ಯಾಪಕ ಪ್ರೊ. ಅಝೆದಿನ್ ಡ್ರಯಿಚ್ ಅವರು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಸಂಶೋಧಕರೊಂದಿಗೆ ಸಂವಾದ ನಡೆಸಿದರು.
‘ದಿ ಪ್ಲಾಂಟ್ ಸೆಲ್ ವಾಲ್: ಸ್ಟ್ರಕ್ಚರಲ್ ಅಂಡ್ ಫಂಕ್ಷನಲ್ ಪ್ರಾಪರ್ಟೀಸ್’ ವಿಷಯದ ಕುರಿತು ಅವರು ಸಂಶೋಧನಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಪ್ರೊ.ಡ್ರಯಿಚ್ ಅವರು ತುಮಕೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗವು ನಡೆಸುತ್ತಿರುವ ಇಂಡೋ-ಫ್ರೆಂಚ್ ಸಂಶೋಧನ ಯೋಜನೆಯೊಂದರ ಮುಖ್ಯಸ್ಥರಾಗಿದ್ದಾರೆ. ಇಂಡೋ-ಫ್ರೆಂಚ್ ಸೆಂಟರ್ ಫಾರ್ ಪ್ರಮೋಶನ್ ಆಫ್ ಅಡ್ವಾನ್ಸ್‍ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯು ಇದಕ್ಕಾಗಿ ರೂ. 2.29 ಕೋಟಿ ಅನುದಾನವನ್ನು ನೀಡಿದೆ.
ತುಮಕೂರು ವಿ.ವಿ. ಕುಲಪತಿ ಪ್ರೊ. ಜಯಶೀಲ, ಕುಲಸಚಿವ ಪ್ರೊ. ಬಿ. ಎಸ್. ಗುಂಜಾಲ್ ಅವರು ಪ್ರೊ. ಡ್ರಯಿಚ್ ಅವರನ್ನು ಸನ್ಮಾನಿಸಿದರು. ಡಾ. ಆರ್. ಜಿ. ಶರತ್‍ಚಂದ್ರ, ಡಾ. ರಾಜಾನಾೈಕ ಮತ್ತಿತರ ಪ್ರಾಧ್ಯಾಪಕರು ಉಪಸ್ಥಿತರಿದ್ದರು.