ಮಕ್ಕಳು ವಿದ್ಯಾರ್ಥಿ ದಿಸೆಯಿಂದಲೇ ಕನ್ನಡ ಅಭಿಮಾನ ಬೆಳಸಿಕೊಳ್ಳಬೇಕು: ನಂಜುಂಡಸ್ವಾಮಿ
Update: 2017-11-03 17:43 IST
ಹನೂರು, ನ.3: ಮಕ್ಕಳು ತಮ್ಮ ವಿದ್ಯಾರ್ಥಿದಿಸೆಯಿಂದಲೇ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳಸಿಕೂಂಡು, ಕನ್ನಡ ನಾಡು ನುಡಿ ರಕ್ಷಣೆಗೆ ತಮ್ಮನ್ನು ತಾವು ತೊಡುಗಿಸಿಕೂಳ್ಳಬೇಕು ಎಂದು ಭಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಕರೆ ನೀಡಿದ್ದಾರೆ.
ತಾಲೂಕಿನ ಹುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ವಲಯದ ಕನ್ನಡ ಸಾಹಿತ್ಯ ಪರಿಷತ್‍ನ ವತಿಯಿಂದ ಆಯೋಜಿಸಿದ್ದ ಕನ್ನಡ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಆಸಕ್ತಿ ಹುಟ್ಟಿಸಲು ಶಾಲಾ ವಾತಾವರಣದಲ್ಲಿ ರೂಪಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹನೂರು ಕಸಾಪ ಅಧ್ಯಕ್ಷ ಶ್ರೀನಿ ವಾಸ್‍ನಾಯ್ಡು, ಉಪಾಧ್ಯಕ್ಷರ ಅಶೋಕ್, ಶಿಕ್ಷಕರಾದ ರವಿಕುಮಾರ್, ಚಂದ್ರಶೇಖರ್ ಇನ್ನಿತರರು ಉಪಸ್ಥಿತರಿದ್ದರು.