ಫೈಝ್ ಅಹ್ಮದ್ ಫೈಝ್ ಅವರ ಜನಪ್ರಿಯ ಗಝಲ್‌ಗಳಿಂದ ಆಯ್ದ ಕೆಲವು ದ್ವಿಪದಿಗಳು

Update: 2017-11-03 13:28 GMT

ಆಯೇ ತೊ ಯೂನ್ ಕೆ ಜೈಸೇ ಹಮೇಶಾ ಥೇ ಮೆಹರ್ಬಾನ್
ಭೂಲೇ ತೊ ಯೂನ್ ಕೆ ಗೋಯಾ ಕಭೀ ಆಶ್ನಾ ನ ಥೇ
ಅವರು ಬಂದ ವೈಖರಿ ನೋಡಿದರೆ ಅವರೇ ಸದಾ ನಮ್ಮ ಪೋಷಕರಾಗಿದ್ದರೋ ಎಂಬಂತಿತ್ತು
ಅವರು ಮರೆತು ಬಿಟ್ಟದ್ದು ನೋಡಿದರೆ ಅವರಿಗೆಂದೂ ನಮ್ಮ ಪರಿಚಯವೇ ಇರಲಿಲ್ಲವೋ ಎಂಬಂತಿತ್ತು.

ದಿಲ್ ನಾ ಉಮ್ಮೀದ್ ತೊ ನಹೀಂ, ನಾಕಾಮ್ ಹೀ ತೊ ಹೈ
ಲಂಬೀ ಹಯ್ ಘಮ್ ಕೀ ಶಾಮ್, ಮಗರ್ ಶಾಮ್ ಹೀ ತೊ ಹೈ
ಮನಸ್ಸು ನಿರಾಶವಾಗಿಲ್ಲ, ಅದು ಕೇವಲ ಸೋತಿದೆಯಷ್ಟೇ
ದುಃಖದ ಇರುಳು ಬಹಳ ದೀರ್ಘವಾಗಿದೆ, ಆದರೆ ಅದು ಕೇವಲ ಇರುಳೆ ತಾನೇ?

ಓ ಬಾತ್, ಸಾರೆ ಪಸಾನೇ ಮೇ ಜಿಸ್ ಕಾ ಝಿಕ್ರ್ ನಹೀ
ವೊ ಬಾತ್ ಉನ್ಕೋ ಬಹುತ್ ನಾಗವಾರ್ ಗುಝರೀ ಹಾಯ್
ಸಂಪೂರ್ಣ ಕಾದಂಬರಿಯಲ್ಲಿ ಯಾವ ವಿಷಯದ ಪ್ರಸ್ತಾಪವೇ ಇದ್ದಿಲ್ಲವೊ
ಅದೇ ವಿಷಯವು ಅವರಿಗೆ ಬಹಳ ತುಂಬಾ ಅಪ್ರಿಯವೆನಿಸಿ ಬಿಟ್ಟಿದೆ.

ಅಬ್ ಜೋ ಕೋಯೀ ಪೂಚೆ ಭೀ ತೊ ಉಸ್ ಸೇ ಕ್ಯಾ ಶರಹೆ ಹಾಲಾತ್ ಕರೇನ್?
ದಿಲ್ ಟೆಹರೆ ತೊ ದರ್ದ್ ಸುನಾಯೇಂ, ದರ್ದ್ ಥಮೇ ತೊ ಬಾತ್ ಕರೇನ್?
ಈಗ ಯಾರಾದರೂ ವಿಚಾರಿಸಿದರೂ, ನಾವು ಅವರೊಡನೆ, ಪರಿಸ್ಥಿತಿಯನ್ನು ಏನೆಂದು ವಿವರಿಸೋಣ?
ಮನಸ್ಸಿಗೆ ಒಂದಿಷ್ಟು ವಿರಾಮ ದೊರೆತರೆ ನೋವನ್ನು ತಿಳಿಸಬಹುದಿತ್ತು, ನೋವು ಒಂದಿಷ್ಟು ನಿಂತಿದ್ದರೆ ಮಾತನಾಡಬಹುದಿತ್ತು.

ಶಾಮ್ ಹುಯೀ ಫಿರ್ ಜೋಶೆ ಖರಝಾ ನೇ ಬಜಮೆ ಹರೀಪಾನ್ ರೋಷನ್ ಕೀ
ಘರ್ ಕೋ ಆಗ್ ಲಗಾಯೆನ್, ಹಮ್ ಭೀ ರೋಷನ್ ಅಪ್‌ನೀ ರಾತ್ ಕರೇನ್
ಸಂಜೆಯಾಯಿತು, ವಿಧಿಯ ಆವೇಶವು ಮತ್ತೆ ವಿರೋಧಿಗಳ ನೆಲೆಯನ್ನು ಬೆಳಗಿ ಬಿಟ್ಟಿದೆ
ಬನ್ನಿ ನಾವೂ ಮನೆಗೆ ಕಿಚ್ಚು ಹಚ್ಚೋಣ, ನಮ್ಮ ಇರುಳನ್ನು ಬೆಳಗೋಣ.

ಖತ್ಲೆ ದಿಲ್ ಒ ಜಾನ್ ಆಪ್‌ನೇ ಸರ್ ಹೇ, ಅಪ್ನಾ ಲಹೂ ಅಪ್‌ನೀ ಗರ್ದನ್ ಪೇ
ಮೊಹರ್ ಬ ಲಬ್ ಬೈಠೇ ಹೈನ್, ಕಿಸ್ ಕಿಸ್ ಕಾ ಶಿಕ್ವಾ ಕಿಸ್ ಕೇ ಸಾಥ್ ಕರೇನ್?
ಮನಸ್ಸು ಜೀವಗಳ ಹತ್ಯೆಯ ಆರೋಪ ನಮ್ಮ ಮೇಲಿದೆ, ನಮ್ಮದೇ ಹತ್ಯೆಯ ಆರೋಪವು ನಮ್ಮ ಮೇಲಿದೆ,
ಬಾಯಿಗೆ ಬೀಗ ಜಡಿದು ಕೂತಿದ್ದೇವೆ, ಯಾರ ಬಳಿ ಯಾರನ್ನು ದೂರೋಣ?

ಹಿಜ್ರ್ ಮೇ ಶಬ್ ಭರ್ ದರ್ದ್ ಒ ತಲಬ್ ಕೆ ಚಾಂದ್ ಸಿತಾರೇ ಸಾಥ್ ರಹೇ
ಸುಬಹ್ ಕೀ ವೇರಾನೀ ಮೇ ಯಾರೋ, ಕೈಸೇ ಬಸರ್ ಔಖಾತ್ ಕರೇನ್?
ವಿರಹದಲ್ಲಿ ಇರುಳೆಲ್ಲಾ, ನೋವು, ನಿವೇದನೆಗಳೆಂಬ ಚಂದ್ರ, ತಾರೆಗಳು ಜೊತೆಗಿದ್ದವು,
ಇದೀಗ ನಿರ್ಜನ ಬೆಳಕಿನಲ್ಲಿ ಮಿತ್ರರೇ, ಬದುಕನ್ನು ಹೇಗೆಂದು ಸಾಗಿಸೋಣ?

ದರ್ದ್ ಇತ್ನಾ ಹೈ ಕೆ ಹರ್ ರಗ್ ಮೇ ಹೈ ಮೆಹ್ಷರ್ ಬರ್ಪಾ
ಔರ್ ಸುಖ್ ಏಸಾ ಕೆ ಮರ್ ಜಾನೇಕೋ ಜೀ ಚಾಹತಾ ಹೈ
ನೋವು ಎಷ್ಟಿದೆಯೆಂದರೆ ನರನರದಲ್ಲೂ ಪ್ರಳಯವು ಮೆರೆೆದಿದೆ,
ಸುಖ ಹೇಗಿದೆಯೆಂದರೆ, ಸತ್ತು ಹೋಗಲು ಮನವು ತುಡಿಯುತ್ತಿದೆ.

Writer - ಸಾದಿಕ್ ಪುತ್ತಿಗೆ

contributor

Editor - ಸಾದಿಕ್ ಪುತ್ತಿಗೆ

contributor

Similar News