×
Ad

ಶ್ರೀಗಂಧ ಮರ ಕಳವು: ನಾಲ್ವರ ಬಂಧನ

Update: 2017-11-03 19:54 IST

ತುಮಕೂರು, ನ.3: ಖಾಸಗಿ ಜಮೀನಿನಲ್ಲಿದ್ದ ಶ್ರೀಗಂಧದ ಮರವನ್ನು ಕಳವು ಮಾಡಿದ್ದ ಆರೋಪಿಗಳನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.

ಕಳೆದ ಅಕ್ಟೋಬರ್ 28ರಂದು ಕೊರಟಗೆರೆ ತಾಲೂಕು ಸೂರೇನಹಳ್ಳಿಯ ಜಗದೀಶ್ ಎಂಬವರ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಕಳುವು ಮಾಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತಿದ್ದ ಕೊರಟಗೆರೆ ಪೊಲೀಸರು, ತೋವಿನಕೆರೆ ಗ್ರಾಮದ ಸಮೀಪ ಅನುಮಾನಾಸ್ಪದವಾಗಿ ನವೆಂಬರ್ 1 ರಂದು ತಿರುಗಾಡುತ್ತಿದ್ದ ಜಾಫರ್(22), ರಾಕೇಶ್(21), ಸುರೇಶ್(20), ಮನೋಜ್‍ ಕುಮಾರ್(21) ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊರಟಗೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಶ್ರೀಗಂಧದ ಮರ ಕಳವು ಪ್ರಕರಣವನ್ನು ಒಪ್ಪಿಕೊಂಡಿದ್ದಾರೆ.

ಬಂಧಿತರಿಂದ ಒಂದು ಲಕ್ಷ ಬೆಲೆ ಬಾಳುವ ಸುಮಾರು 2ಕ್ವಿಂಟಾಲ್ ತೂಕದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News