×
Ad

ಮೇಕೇರಿಗೆ ಮಡಿಕೇರಿಯಿಂದ ವಿದ್ಯುತ್ ಸಂಪರ್ಕ: ಡಿಕೆಶಿ ಭರವಸೆ

Update: 2017-11-03 22:48 IST

ಮಡಿಕೇರಿ, ನ.3: ಮೇಕೇರಿ ಗ್ರಾಮಕ್ಕೆ ಮಡಿಕೇರಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಭರಸೆ ನೀಡಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ ತಿಳಿಸಿದ್ದಾರೆ.

ಮೇಕೇರಿ ಗ್ರಾಮದ ಬಹುದಿನಗಳ ಕನಸಾಗಿರುವ ವಿದ್ಯುತ್ ಸಂಪರ್ಕ 11 ಕಿ.ಮೀ ದೂರದ ಕಡಗದಾಳು ಗ್ರಾಮದ ಮೂಲಕ ಕಲ್ಪಿಸುವ ಬದಲು ಕೇವಲ ಮೂರು ಕಿ.ಮೀ. ದೂರದ ಮಡಿಕೇರಿಯಿಂದ ಕಲ್ಪಿಸಬೇಕೆಂದು ಬೆಂಗಳೂರಿನಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ವೇಳೆ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಫಿ ಕೊಟ್ಟಮುಡಿ ತಿಳಿಸಿದ್ದಾರೆ.

ಈ ವಿದ್ಯುತ್ ಸಂಪರ್ಕದಿಂದ ಮೇಕೇರಿ ಸಮೀಪದ ಕಗ್ಗೋಡ್ಲು, ಹಾಕತ್ತೂರು, ಬಿಳಿಗೇರಿ ಮತ್ತು ಅರುವತೊಕ್ಲು ಗ್ರಾಮಗಳಿಗೆ ಮಳೆಗಾಲದಲ್ಲಿ ಎದುರಾಗುತ್ತಿದ್ದ ವಿದ್ಯುತ್ ಅಡಚಣೆಯ ಸಮಸ್ಯೆ ತಪ್ಪಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಚಿವರ ಭೇಟಿ ಸಂದರ್ಭ ಹಾಕತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹನೀಫ್ ಮೇಕೇರಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಬಾಲಾಡಿ ಪ್ರತಾಪ್ ಕುಮಾರ್, ಪ್ರಮುಖರಾದ ಕೆ.ಪಿ. ಹ್ಯಾರಿಸ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News