×
Ad

ಹನೂರು: ಬೂತ್ ಮಟ್ಟದ 'ಮನೆ ಮನೆ ಕಾಂಗ್ರೆಸ್' ಕಾರ್ಯಕ್ರಮ

Update: 2017-11-04 18:03 IST

ಹನೂರು, ಅ.4: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತ್ರತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಜನ ಸಾಮಾನ್ಯರಿಗೆ ಹಲವಾರು ಅಬಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದು ಪ್ರಣಾಳಿಕೆಯಲ್ಲಿ ತಿಳಿಸಿದ ಬಹುತೇಕ ಎಲ್ಲಾ ಭರವಸೆಗಳನ್ನೂ ಸರಕಾರ ಈಡೇರಿಸಿದೆ ಎಂದು ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಜಾವದ್ ಅಹ್ಮದ್ ತಿಳಿಸಿದ್ದಾರೆ.

ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಬೂತ್ ಮಟ್ಟದ ಮನೆಮನೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು,

ರಾಜ್ಯದಲ್ಲಿ ಕಾಂಗ್ರಸ್ ಸರಕಾರ ಯಾವುದೇ ಹಗರಣಕ್ಕೆ ಸಿಲುಕದೆ, ಮುಕ್ತವಾಗಿ ಆಡಳಿತ ನೆಡಸಿ ಭಾರತದಲ್ಲಿಯೇ ಮಾದರಿ ಸರ್ಕಾರವೆಂಬ ಹೆಗ್ಗಳಿಕೆ ಪಾತ್ರವಾಗಿದೆ. ಹನೂರು ಕ್ಷೇತ್ರವು ತನ್ನದೇ ಇತಿಹಾಸವನ್ನು ಹೊಂದಿದ್ದು, ದಿವಂಗತರಾದ ವೆಂಕಟಗೌಡ ಹಾಗೂ ರಾಜೂಗೌಡರ ಕನಸಿನಂತೆ ಇಂದು ಶಾಸಕ ನರೇಂದ್ರರವರು ಯಾವುದೇ ಜಾತಿ ಧರ್ಮಕ್ಕೆ ಸಿಮೀತವಾಗದೇ ಕಳಂಕ ರಹಿತವಾಗಿ ಸ್ವಚ್ಚಂದ ಆಡಳಿತ ನೆಡಿಸುತ್ತಿರುವುದು ಇತರೆ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಹನೂರು ವಿದಾನ ಸಭಾಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನೆಡದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅಬಿವೃದ್ಧಿಗೆ ಶಾಸಕ ನರೇಂದ್ರರವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ, ಗ್ರಾ.ಪಂ ಅಧ್ಯಕ್ಷ ರಾಜಪ್ಪ, ಮುಖಂಡರಾದ ಬಿ.ಕೆ ನಜರ್ ಅಹ್ಮದ್, ನಿಂಗರಾಜು, ದೊಡ್ಡಕುನ್ನನಾಯಕ ಹಾಗೂ ಕಾರ್ಯಕರ್ತರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News