×
Ad

ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲುವು: ಶಿವು ವಿಶ್ವಾಸ

Update: 2017-11-04 22:54 IST

ಮಡಿಕೇರಿ, ನ.4: ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ‘ಮನೆ ಮನೆ ಕಡೆಗೆ ಕಾಂಗ್ರೆಸ್ ನಡಿಗೆ’ ಅಭಿಯಾನವನ್ನು ಚುರುಕುಗೊಳಿಸಿದ್ದು, ಮಾದಾಪುರ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಶನಿವಾರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ರಾಜ್ಯ ಸರಕಾರದ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಈ ಸಂದರ್ಭ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್‌ನ ಉಸ್ತುವಾರಿ ಕಾನೆಹಿತ್ಲು ಮೊಣ್ಣಪ್ಪ ಮಾತನಾಡಿ, ಮನೆ ಮನೆ ಕಡೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮವನ್ನು ಮತ್ತಷ್ಟು ಬಿರುಸುಗೊಳಿಸಲಾಗುವುದೆಂದರು. ಅಭಿಯಾನ ಸಂದರ್ಭ ಪಕ್ಷದ ಪರವಾಗಿ ಜನರ ಬೆಂಬಲ ವ್ಯಕ್ತವಾಗುತ್ತಿದೆಯೆಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಖಜಾಂಚಿ ಮನು ಮೇದಪ್ಪ, ಪ್ರಮುಖರಾದ ಎಸ್.ಎಂ. ಚಂಗಪ್ಪ, ಕೆ.ಎಂ. ಲೋಕೇಶ್, ಕೆಪಿಸಿಸಿ ಪದಾಧಿಕಾರಿ ಕೆ.ಪಿ. ಚಂದ್ರಕಲಾ, ಮಾದಾಪುರ ಜಿಪಂ ಸದಸ್ಯರಾದ ಕುಮುದಾ ಧರ್ಮಪ್ಪ, ರಾಜ್ಯ ಉಪಾಧ್ಯಕ್ಷ ಎನ್.ಎಂ.ಮುತ್ತಪ್ಪ, ವಕ್ತಾರ ಟಿ.ಎಂ. ಅಯ್ಯಪ್ಪ, ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಎಸ್.ಸುಂದರ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ಗ್ರಾಪಂ ಉಪಾಧ್ಯಕ್ಷೆ ಭಾರತಿ, ಡಿಸಿಸಿ ಸದಸ್ಯರಾದ ಎಂ.ಎ. ಉಸ್ಮಾನ್, ಪುಷ್ಪಾ ಪೂಣಚ್ಚ, ವಲಯ ಕಾಂಗ್ರೆಸ್ ಅಧ್ಯಕ್ಷ ದಾದಾ ಬೆಳ್ಯಪ್ಪ, ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ, ವಕ್ಫ್ ಬೋರ್ಡಿನ ಮಾಜಿ ಅಧ್ಯಕ್ಷ ಎಂ.ಎ.ಉಸ್ಮಾನ್, ತಾಪಂ ಸದಸ್ಯ ಅಪ್ರು ರವೀಂದ್ರ, ಅಜೀಜ್, ಸಮ್ಮದ್, ರಘು ಮಾದಪ್ಪ, ಹೊಟ್ಟೆಂಗಡ ಪಾರ್ವತಿ ಮತ್ತಿತರರಿದ್ದರು.
ಸರಕಾರದ ಸಾಧನೆಯ ಕೈಪಿಡಿಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News