ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತ್ಯು
Update: 2017-11-05 17:43 IST
ಶಿವಮೊಗ್ಗ, ನ. 5: ಈಜಾಡಲು ತೆರಳಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಸಮೀಪದ ಸುಳಗೋಡು ಗ್ರಾಮದ ಮಾವಿನಕೆರೆಯಲ್ಲಿ ನಡೆದಿದೆ.
ಮುಂಬಾಳು ಗ್ರಾಮದ ನಿವಾಸಿಗಳಾದ ಮೇಘರಾಜ (17) ಹಾಗೂ ಸುಮಂತ (17) ಮೃತಪಟ್ಟ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಇವರಿಬ್ಬರು ಆನಂದಪುರಂನ ಸರ್ಕಾರಿ ಪಿಯು ಕಾಲೇಜ್‍ನ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ವರ್ಷದಲ್ಲಿ ಅಭ್ಯಾಸ ನಡೆಸುತ್ತಿದ್ದರು.
ಇವರು ಸ್ನೇಹಿತರ ಜೊತೆ ಈಜಾಡಲು ಕೆರೆಗೆ ತೆರಳಿದ್ದರು. ಆದರೆ ಇವರಿಬ್ಬರಿಗೆ ಈಜು ಬರದಿದ್ದರೂ ಈಜಾಡಲು ಮುಂದಾಗಿದ್ದು ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ. ಸಾಗರದಿಂದ ಆಗಮಿಸಿದ್ದ ಮುಳುಗು ತಜ್ಞರು ನೀರಿನಿಂದ ಶವಗಳನ್ನು ಹೊರ ತೆಗೆದಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.