×
Ad

ಶೀತದ ಔಷಧಿಯಿಂದ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ

Update: 2017-11-05 20:53 IST

ಬಣಕಲ್, ನ.5: ಕೊಟ್ಟಿಗೆಹಾರದ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಬಸ್‌ನಲ್ಲಿ ಮಾರಾಟ ಮಾಡುತ್ತಿದ್ದ ಕೇರಳದ ಕಂಪೆನಿ ಯೊಂದರ ಶೀತ ಔಷಧಿಯು ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಮಗುವಿನ ಸೊಂಟದ ಬಲವನ್ನೇ ಕಸಿದಿರುವ ಘಟನೆ 3ವರ್ಷದ ಬಳಿಕ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ವಿವರ: 3 ವರ್ಷದ ಹಿಂದೆ ಯೋಗೀಶ್ ಅವರ ತಂದೆ ಸಣ್ಣಪ್ಪಕೊಟ್ಟಿಗೆಹಾರಕ್ಕೆ ಬಂದಿದ್ದಾಗ ಕೊಟ್ಟಿಗೆಹಾರದ ಬಸ್ ನಿಲ್ದಾಣದಲ್ಲಿ ಕೇರಳದ ವ್ಯಕ್ತಿಯೊಬ್ಬ ಶೀತದ ಔಷಧಿಯನ್ನು ಕಪ,ಶೀತ,ಕೆಮ್ಮಿಗಾಗಿ ಥರ್ಮಕೋಲ್ ತುಂಡಿಗೆ ಶೀತದ ಔಷಧಿ ಹಾಕಿ ಕೈಯಲ್ಲಿ ಕರಗಿಸಿ ಪ್ರಾಯೋಗಿಕವಾಗಿ ತೋರಿಸಿ 30 ರೂ.ಸಣ್ಣ ಬಾಟಲಿ ಮಾಡಿ ಮಾರುತ್ತಿದ್ದರು. ಪ್ರಯಾಣಿಕರು ಅದನ್ನು ಹಣ ಕೊಟ್ಟು ಪಡೆ ಯುತ್ತಿದ್ದರು.ಹಾಗೆಯೇ ಸಣ್ಣಪ್ಪ ಕೂಡ ಶೀತಕ್ಕಾಗಿ ಔಷಧ ಪಡೆದು ಮನೆಗೆ ತೆರಳಿದ್ದರು.

ಔಷಧಿ ಬಳಸಿ ಮನೆಯ ಕಿಟಕಿಯ ಮೇಲಿಟ್ಟಿದ್ದರಂತೆ, ಆದರೆ ಮೊಮ್ಮಗ ಪ್ರತ್ಯುಷ್ 2 ವರ್ಷದವನಿದ್ದಾಗ ಕಿಟಕಿಯಲ್ಲಿ ಔಷಧಿ ಬಾಟಲಿ ತೆಗೆದು ಬಾಯಿಗೆ ಹಾಕಿದ್ದಾನೆ. ಆದರೆ ತಾಯಿ ಕವಿತಾ ಮನೆಯ ಕೆಲಸದಲ್ಲಿದ್ದರು. ಮಗು ಕಿರುಚಿದನ್ನು ಕಂಡು ಒಳಬಂದು ನೋಡಿದರೆ ಮಗುವಿನ ಬಾಯಿಗೆ ಔಷಧಿ ಸ್ವಲ್ಪ ಸೇರಿ ಬಿಟ್ಟಿದೆ. ಬಳಿಕ ಪ್ರಜ್ಞೆ ತಪಿದ ಮಗುವನ್ನು ಕಳಸ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೋರಿಸಲಾಯಿತು. ಸಾಕಷ್ಟು ಹಣ ಖರ್ಚು ಮಾಡಿ ಮಣಿಪಾಲ ಆಸ್ಪತ್ರೆಗೂ ದಾಖಲಿಸಲಾಯಿತು. ಯೋಗೀಶ್ ಬಡ ಕುಟುಂಬದಿಂದ ಬಂದಿದ್ದು ಜೀವನೋಪಾಯಕ್ಕೆ ರಸ್ತೆ ಬದಿಯಲ್ಲಿ ಸಣ್ಣ ವ್ಯಾಪಾರ ಮಾಡಿ ಜೀವಿಸುತ್ತಿದ್ದಾರೆ. ತಿಂಗಳಿಗೆ 6 ಸಾವಿರ ರೂ.ಔಷಧಿಗೆ ತೆಗೆದಿಡಬೇಕಿದೆ. ದಾನಿಗಳು ನೆರವಾದರೆ ಮಗುವಿನ ಹಾರೈಕೆ ಮಾಡಬಹುದು ಎನ್ನುವುದು ಪೋಷಕರ ಆಶಯ.

ದಾನಿಗಳು ಕಂದಮ್ಮನ ನೆರವಿಗೆ ಬರುವುದಾದರೆ ಜಾವಳಿಯ ಸಿಂಡಿಕೇಟ್ ಬ್ಯಾಂಕ್ ಖಾತೆ ಸಂಖ್ಯೆ: 09032210008772. IFSC COD:SYNB0000903ಕ್ಕೆ ಸಂದಾಯ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.8105099139 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News