ಗುಂಡ್ಲುಪೇಟೆ: ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
Update: 2017-11-06 16:58 IST
ಗುಂಡ್ಲುಪೇಟೆ, ನ.6: ಎತ್ತುಗಳಿಗೆ ನೀರು ಕುಡಿಸಲು ಹೋಗಿದ್ದ ಯುವಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಮಂಚಹಳ್ಳಿ ಗ್ರಾಮದ ಹುಲಿಕೆರೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಗ್ರಾಮದ ಮಹದೇವಸ್ವಾಮಿ ಎಂಬವರ ಪುತ್ರ ಮೋಹನ್(19) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಮೋಹನ್ ತಮ್ಮ ಎತ್ತುಗಳಿಗೆ ನೀರುಕುಡಿಸಲು ಕೆರೆಯಲ್ಲಿ ಇಳಿದು ಎತ್ತುಗಳ ಹಗ್ಗವನ್ನು ಎಳೆಯಲು ಪ್ರಯತ್ನಿಸಿದಾಗ ಕಾಲುಜಾರಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದರು ಮೃತಹೇದಕ್ಕೆ ಶೋಧ ಕಾರ್ಯ ನಡೆಸಿ, ಮಧ್ಯಾಹ್ನ ವೇಳೆಗೆ ಮೃತದೇಹ ಹೊರತೆಗೆದು ಪಟ್ಟಣದ ಸಾರ್ವಜನಿಕ ಆಸ್ಪೆತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರ ವಶಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಬೇಗೂರು ಠಾಣೆಯ ಎಎಸ್ಸೈ ದೊರೆರಾಜು, ಸಿಬ್ಬಂದಿ ಎ.ಮಹೇಶ್ ಹಾಗೂ ಇತರರು ಹಾಜರಿದ್ದರು.