ಶಿವಮೊಗ್ಗ: ಮನೆ ನೀರಿನ ತೊಟ್ಟಿಗೆ ಬಿದ್ದು ಮಕ್ಕಳಿಬ್ಬರು ಮೃತ್ಯು
Update: 2017-11-06 17:52 IST
ಶಿವಮೊಗ್ಗ, ನ.6: ಮನೆಯ ನೀರು ಸಂಗ್ರಹಣದ ತೊಟ್ಟಿಗೆ ಬಿದ್ದು ಮಕ್ಕಳಿಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸವನಗುಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಲಕ್ಷ್ಮಣ್ ಮತ್ತು ಜಯಂತಿ ದಂಪತಿಯ ಪುತ್ರರಾದ ಚೇತನ್ (6) ಹಾಗೂ ದರ್ಶನ್ (3) ಮೃತಪಟ್ಟ ಮಕ್ಕಳಳೆಂದು ಗುರುತಿಸಲಾಗಿದೆ.
ಈ ಸಂಬಂಧ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಲಕ್ಷ್ಮಣ್‍ರವರು ಮನೆಯಲ್ಲಿರಲಿಲ್ಲ. ಅವರ ಪತ್ನಿ ಮಾತ್ರ ಇದ್ದು, ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಕ್ಕಳು ಆಟವಾಡುತ್ತಾ ತೊಟ್ಟಿಯ ಬಳಿ ತೆರಳಿದ್ದಾರೆ. ಈ ವೇಳೆ ಆಯತಪ್ಪಿ ತೊಟ್ಟಿಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಮನೆಯವರು ತೊಟ್ಟಿಯಿಂದ ನೀರು ತರಲು ಹೋದ ವೇಳೆ ಘಟನೆ ಬೆಳಕಿಗೆ ಬಂದಿದೆ.