×
Ad

ಪ್ರತಿಯೊಬ್ಬರೂ ಕನ್ನಡದ ಸತ್ವ ಅರಿತು ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಿ ನಡೆಯಬೇಕು: ಮಲ್ಲಣ್ಣ

Update: 2017-11-06 18:06 IST

ಹನೂರು, ನ.6: ಯಾವ ಸಾಹಿತ್ಯದಲ್ಲೂ ಇರದ ಅದ್ಭುತ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿದೆ. ಪ್ರತಿಯೊಬ್ಬರೂ ಕನ್ನಡದ ಸತ್ವವನ್ನು ಅರಿತು ಅದರಂತೆ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಿ ನಡೆಯಬೇಕೆಂದು ಎಂದು ಸಂಸ್ಕೃತ ಶಿಕ್ಷಕ ಮಲ್ಲಣ್ಣರವರು ತಿಳಿಸಿದ್ದಾರೆ.

ಪಟ್ಟಣದ ಗೌತಮ್ ವಿದ್ಯಾಸಂಸ್ಥೆಯಲ್ಲಿ ಹನೂರು ವಲಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕನಕ ಜಯಂತಿ ಹಾಗೂ ಕನ್ನಡ ನಿತ್ಯೋ ತ್ಸವ ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಪಂಚದಲ್ಲಿ ಎಲ್ಲಾ ಭಾಷೆಗಳಿಗಿಂತ ವಿಶಿಷ್ಟವಾದದ್ದು ಕನ್ನಡ ಭಾಷೆ. ಈ ಕನ್ನಡ ಭಾಷೆಯ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ಅನುಪಮಾ ಕೂಡುಗೆ ನೀಡಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಹನೂರು ಕಸಾಪ ಅಧ್ಯಕ್ಷ ಶ್ರೀನಿವಾಸ್‍ ನಾಯ್ಡು, ಉಪಾಧ್ಯಕ್ಷ ಅಶೋಕ್, ಗೌತಮ್ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಕಸಾಪ ಕಾರ್ಯದರ್ಶಿ ರವೀಂದ್ರ, ಕನ್ನಡ ರಕ್ಷಣಾ ವೇದಿಕೆಯ ಸ್ವಾಭಿ ಮಾನಿ ಬಳಗದ ಅಧ್ಯಕ್ಷ ವಿನೋದ್, ಶಿಕ್ಷಕರಾದ ಸೋಮ್ಮಣ್ಣ, ಮಲ್ಲೇಶ್ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News