×
Ad

ಹತ್ಯೆ ಪ್ರಕರಣ: ಆರೋಪಿಯ ಬಂಧನ

Update: 2017-11-06 20:26 IST

ಮೈಸೂರು, ನ.6:  ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶನಿವಾರ ತಡರಾತ್ರಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ  ಓರ್ವ ಆರೋಪಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತನನ್ನು ಅಶೋಕಪುರಂ ನಿವಾಸಿ ಸಿದ್ದರಾಜು(30) ಎಂದು ತಿಳಿದು ಬಂದಿದೆ. 

ಪೌರ್ಣಿಮೆಯ ಪ್ರಯುಕ್ತ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಿದ್ದರಾಜು, ಪ್ರಭು ತೆರಳಿದ್ದರು. ಊಟ ಮುಗಿಸಿ ಬರುವ ವೇಳೆ ಸೂರಿ ಅಲಿಯಾಸ್ ಸುರೇಶ್ ಅಲಿಯಾಸ್ ಚಟ್ ಪಟ್ ಎಂಬಾತನಿಗೆ ಸಿದ್ದರಾಜು ಅವಾಚ್ಯವಾಗಿ ಬೈದಿದ್ದು, ಇದನ್ನು ಕಂಡ ಪ್ರಭು, ಸಿದ್ದರಾಜು ಕೆನ್ನೆಗೆ ಹೊಡೆದಿದ್ದಾನೆ. ಈ ದ್ವೇಷದ ಹಿನ್ನೆಲೆಯಲ್ಲಿ ಸಿದ್ದರಾಜು, ಪ್ರಭುವನ್ನು ಚಾಕುವಿನಿಂದ ಇರಿದು ಕೊಲೆಗೈಯ್ದಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. 

ಇನ್ ಸ್ಪೆಪೆಕ್ಟರ ಪ್ರಕಾಶ್, ಎಎಸ್‍ಯ ಲಕ್ಷ್ಮಿನಾರಾಯಣ, ಪೊಲೀಸ್ ಸಿಬ್ಬಂದಿಗಳಾದ ಸುಬ್ರಹ್ಮಣಿ, ಶರೀಫ್, ಅಶೋಕಪುರಂ ಠಾಣೆಯ ಮಹದೇವ್ ಕೊಲೆಗಾರನ  ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರು.

ಪೊಲೀಸರ ಕಾರ್ಯಕ್ಕೆ ಡಿಸಿಪಿ ವಿಕ್ರಂ ಆಮ್ಟೆ ಮತ್ತು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಶ್ಲಾಘಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News