ಮದುವೆ ದಿಬ್ಬಣದ ವಾಹನ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ
Update: 2017-11-06 22:19 IST
ಮದ್ದೂರು, ನ.6: ಮದುವೆ ದಿಬ್ಬಣದ ವಾಹನ ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಅವರಸದಹಳ್ಳಿ ಮತ್ತು ಯಡಾನಹಳ್ಳಿ ಗ್ರಾಮದ 14 ಮಂದಿ ಕುಟುಂಬದವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಸೋಮವಾರ ತಲಾ 2 ಲಕ್ಷ ರೂ. ಪರಿಹಾರದ ಚೆಕ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣಪ್ಪ, ಈ ಮೊದಲು1 ಲಕ್ಷ ರೂ. ಪರಿಹಾರ ಘೋಷಿಸಲಾಗಿತ್ತು. ಬಳಿಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅವರ ಮನವೊಲಿಸಿದಾಗ ಅವರು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ 2 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದರು.
ಶಾಸಕ ಡಿ.ಸಿ.ತಮ್ಮಣ್ಣ, ಜಿಲ್ಲಾಧಿಕಾರಿ ಮಂಜುಶ್ರೀ, ಮಾಜಿ ಶಾಸಕಿ ಕಲ್ಪನ ಸಿದ್ದರಾಜು, ಜಿಪಂ ಸಿಇಒ ಶರತ್, ಎಪಿಎಂಸಿ ಅಧ್ಯಕ್ಷ ಕೆ.ಎಸ್.ನಾಗೇಶ್, ಉಪಾಧ್ಯಕ್ಷೆ ಮಮತಾ ಶಂಕರೇಗೌಡ, ನಿರ್ದೇಶಕರಾದ ಮಹೇಂದ್ರ, ಸಂದೀಪ್, ಅಜ್ಜಹಳ್ಳಿ ರಾಮಕೃಷ್ಣ, ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕಂಕನಹಳ್ಳಿ ಮನು, ಜಿಪಂ ಮಾಜಿ ಸದಸ್ಯ ರವಿ, ಕೆ.ದಾಸೇಗೌಡ, ಮಂಚೇಗೌಡ, ತಹಶೀಲ್ದಾರ್ ನಾಗರಾಜು ಇತರರು ಹಾಜರಿದ್ದರು.