ರಾಜ್ಯ ಸರಕಾರ ನುಡಿದಂತೆ ನಡೆದಿದೆ: ನರೇಂದ್ರರಾಜೂಗೌಡ
ಹನೂರು, ನ.7: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 2013ರ ಚುನಾವಣೆಗೆ ಪ್ರಣಾವಳಿಕೆಯಲ್ಲಿ 165 ಭರವಸೆಗಳನ್ನು ನೀಡಿದ್ದು, ಇದರಲ್ಲಿ 159 ಭರವಸೆಗಳನ್ನು ಸರ್ಕಾರ ಈಗಾಗಲೇ ಈಡೇರಿಸಿ ನುಡಿದಂತೆ ನಡೆದಿದ್ದೇವೆ ಎಂದು ಶಾಸಕ ನರೇಂದ್ರ ರಾಜೂಗೌಡ ತಿಳಿಸಿದ್ದಾರೆ.
ಪಟ್ಟಣದಲ್ಲಿ ಆಯೋಜಿಸಿದ್ದ ಮನೆ ಮನೆಗೆ ಕಾಂಗ್ರೆಸ್ ನೆಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಮ್ಮ ಸರಕಾರ ಅತ್ಯುತ್ತಮ ಆಡಳಿತ ನೀಡಿ ರಾಜ್ಯಕ್ಕೆ ಪ್ರಶಸ್ತಿ ದೂರಕುವಂತೆ ಮಾಡಿದೆ. ಇದರ ಜತೆಗೆ ಇನ್ನೂ ಹಲವು ಯೋಜನೆಗಳು ಜಾರಿಗೂಳಿಸುವುದರ ಮುಖಾಂತರ ಜನಮನ್ನಣೆಗಳಿಸಿದೆ. ಆದ್ದರಿಂದ ಇದ್ದನ್ನು ಮನದಟ್ಟು ಮಾಡಿಕೂಂಡು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು .
ಕೇಂದ್ರದಲ್ಲಿ ಬಿಜೆಪಿ ಪೊಳ್ಳು ಭರವಸೆಯ ಮುಖಾಂತರ ಅಧಿಕಾರಕ್ಕೆ:
ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಪ್ರತೀ ಪ್ರಜೆಗೂ ಉದ್ಯೋಗ ಹಾಗೂ ಸ್ವಿಸ್ ಬ್ಯಾಂಕ್‍ನಿಂದ ಕಪ್ಪು ಹಣ ತಂದು 15 ಲಕ್ಷ ರೂ. ಹಣ ಜಮಾ ಮಾಡುವುದಾಗಿ ಹೇಳಿದ ಮೂರು ವರ್ಷಗಳು ಕಳೆದಿವೆ. ಇದುವರೆಗೂ ನಯಾ ಪೈಸೆಯೂ ಯಾವಬ್ಬ ಪ್ರಜೆಗೂ ಬಂದಿಲ್ಲ. ದಿನೇ ದಿನೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ ಎಂದರು.
ಈ ವೇಳೆ ಪ್ರತೀ ಮನೆಗೆ 'ಮನೆ ಮನೆಗೆ ಕಾಂಗ್ರೆಸ್' ಅರಿವಿನ ಕಾರ್ಯಕ್ರಮದ ಪುಸ್ತಕ ನೀಡಿ ಮನೆ ಎದುರು ಭಿತ್ತಿಪತ್ರ ಅಂಟಿಸಲಾಯಿತು.
ಈ ಸಂದರ್ಭದಲ್ಲಿ ಚಾಮರಾಜನಗರ ಹಾಲು ಒಕ್ಕೂಟದ ಅಧ್ಯಕ್ಷ ಗುರುಮಲ್ಲಪ್ಪ, ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ದೇವರಾಜು, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹ್ಮದ್, ಪ.ಪಂ ಅಧ್ಯಕ್ಷ ಮಮತಾ, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಬಾಲರಾಜ್ ನಾಯ್ಡು, ರಮೇಶ್ ನಾಯ್ಡು, ಚಾಮುಲ್ ನಿರ್ದೇಶಕ ನಂಜುಂಡ ಸ್ವಾಮಿ, ಮುಖಂಡರಾದ ಮಂಗಲ ಪುಟ್ಟರಾಜು, ಪಾಳ್ಯಕೃಷ್ಣ ತಾರೀಖ್, ಸಿದ್ದರಾಜು, ಮಾದೇಶ್, ರವಿ, ಗಿರೀಶ್ ,ನಟರಾಜು, ರಾಜೇಶ್, ರಾಜೂ, ವೆಂಕಟೇಶ್ ಮತ್ತಿತರರಿದ್ದರು.