ನೀರಿಗೆ ಬಿದ್ದು ಬುದ್ಧಿಮಾಂದ್ಯ ಯುವಕ ಮೃತ್ಯು
Update: 2017-11-07 22:08 IST
ಮಳವಳ್ಳಿ, ನ.7: ಬುದ್ಧಿಮಾಂದ್ಯ ಯುವಕನೊಬ್ಬ ನಿಂತ ನೀರಿನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಎಚ್.ಬಸಾಪುರ ಗ್ರಾಮದ ಭೀಮಾನದಿ ಬಳಿ ನಡೆದಿದೆ.
ಬಸಾಪುರ ಗ್ರಾಮದ ವಾಸಿ ಕೆಂಪೇಗೌಡ(24) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಹಲಗೂರು ಠಾಣೆ ಎಸ್ಸೈ ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.