×
Ad

ಸ್ಪೀಡ್ ಗವರ್ನರ್ ಆದೇಶ ಹಿಂಪಡೆಯಲು ಆಗ್ರಹಿಸಿ ಧರಣಿ

Update: 2017-11-07 22:43 IST

ಶಿವಮೊಗ್ಗ, ನ.7: ಹಳೆಯ ವಾಣಿಜ್ಯ ವಾಹನಗಳ ಸ್ಪೀಡ್ ಗವರ್ನರ್ ಆದೇಶ ಹಿಂಪಡೆಯಬೇಕು. ಕರ್ನಾಟಕ ಮತ್ತು ಕೇರಳ ಮಧ್ಯೆ ಇರುವ ರಸ್ತೆ ತೆರಿಗೆ ತಾರತಮ್ಯವನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಪ್ರವಾಸಿ ಮ್ಯಾಕ್ಸಿಕ್ಯಾಬ್ ಚಾಲಕರ ಮತ್ತು ಮಾಲಕ ಸಂಘದವರು ಮಂಗಳವಾರ ಆರ್‌ಟಿಒ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.

ಈ ಸಂದಭರ್ದಲ್ಲಿ ಮಾತನಾಡಿದ ಸಂದ ಅಧ್ಯಕ್ಷ ಸತೀಶ್‌ಪೂಜಾರಿ, ಜಿಲ್ಲೆಯಲ್ಲಿ ಸಾವಿರಾರು ಮ್ಯಾಕ್ಸಿಕ್ಯಾಬ್‌ಗಳು ಕಾರ್ಯನಿರ್ವಹಿಸುತ್ತಿವೆ. ಸಾಲ ಪಡೆದು ಇವುಗಳನ್ನು ಖರೀದಿಸಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಸರಕಾರ ಏಕಾಏಕಿ ಸ್ಪೀಡ್ ಗೌರ್ನರ್‌ನಂತಹ ಅವೈಜ್ಞ್ಞಾನಿಕ ಯೋಜನೆ ಹೇರಿರುವುದು ಸಹಿಸಲು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ವಾಹನಗಳಿಗೆ ಸ್ಪೀಡ್ ಗೌರ್ನರ್ ಅಳವಡಿಕೆ ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಕೋಣೆಗದ್ದೆ, ಪದಾಧಿಕಾರಿಗಳಾದ ರಾಘವೇಂದ್ರ, ಭರತ್, ಮಣಿ, ಯೋಗೀಶ್, ಸಂತೋಷ್, ಪರಮೇಶ್, ಈಶ್ವರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News