×
Ad

ನ.11 ರಿಂದ ರಾಷ್ಟ್ರೀಯ ಪೋಷಕರ ಸಭೆ

Update: 2017-11-08 19:52 IST

ಬೆಂಗಳೂರು, ನ.8: ಬುದ್ಧಿಶಕ್ತಿ ಮತ್ತು ವಿಕಾಸದಲ್ಲಿ ನ್ಯೂನತೆ ಹೊಂದಿರುವ ವ್ಯಕ್ತಿಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಪರಿವಾರ ಒಕ್ಕೂಟ ಹಾಗೂ ಪೇರೆಂಟ್ಸ್ ಅಸೋಸಿಯೇಷನ್ ಫಾರ್ ದಿ ಮೆಂಟಲಿ ರಿಟಾರ್ಡೆಡ್ ಸಿಟಿಜನ್ಸ್ (ಕೆಪಿಎಂಆರ್‌ಸಿ) ಸಂಸ್ಥೆ ಸಹಯೋಗದಲ್ಲಿ ನ. 11 ಮತ್ತು 12ರಂದು 25ನೆ ರಾಷ್ಟ್ರೀಯ ಪೋಷಕರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಎಂಆರ್‌ಸಿ ಆಧ್ಯಕ್ಷ ಪ್ರೊ. ವೆಂಕಟೇಶ್, ನಗರದ ಬೆನ್ಸನ್‌ ಟೌನ್‌ನ ನಂದೀದುರ್ಗ ರಸ್ತೆಯ ಆರ್ಚ್‌ಡಿಯೋಸಿಸಾನ್ ಪ್ಯಾಸ್ಟೊರಲ್ ಸೆಂಟರ್‌ನ ಪಾಲನಾ ಭವನದಲ್ಲಿ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಬುದ್ಧಿಶಕ್ತಿ ಮತ್ತು ವಿಕಾಸದಲ್ಲಿ ನ್ಯೂನತೆ ಹೊಂದಿರುವ ವ್ಯಕ್ತಿ ಹಾಗೂ ಕುಟುಂಬಗಳ ಸಬಲೀಕರಣ ಹಾಗೂ ಅವರ ಹಕ್ಕುಗಳನ್ನು ಸಾಕಾರಗೊಳಿಸುವ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.

ಇಂತಹ ವ್ಯಕ್ತಿಗಳಿಗೆ ರಾಜ್ಯ ಸರಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಯೋಜನೆಗಳು, ಸಂಶೋಧನೆ, ಧನಸಹಾಯ ಮುಂತಾದ ವಿಚಾರಗಳ ಕುರಿತು ಮಾಹಿತಿ ನೀಡಲಾಗುವುದು. ಕಾರ್ಯಕ್ರಮವನ್ನು ಪುದುಚೇರಿಯ ರಾಜ್ಯಪಾಲೆ ಡಾ. ಕಿರಣ್ ಬೇಡಿ ಉದ್ಘಾಟಿಸಲಿದ್ದು, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಸಚಿವ ಡಾ. ತಾವರ್ ಚಂದ್ ಗೆಹಲಟ್, ನ್ಯಾಷನಲ್ ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ಮುಖೇಶ್ ಜೈನ್, ಸಿಇಒ ಡಾ. ಹಿಮಾಂಗ್‌ಷುದಾಸ್ ಮೊದಲಾವರು ಭಾಗವಹಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News