×
Ad

ಬೀಟೆ ಮರ ಕಳ್ಳತನಕ್ಕೆ ಯತ್ನ: ಇಬ್ಬರ ಬಂಧನ

Update: 2017-11-08 23:44 IST

ಸುಂಟಿಕೊಪ್ಪ, ನ.8: ಹಾಡಹಗಲೇ ಕಾಫಿ ತೋಟದಿಂದ ಬೀಟೆ ಮರವನ್ನು ಕೊಯ್ದು ಕಳ್ಳತನಕ್ಕೆ ಯತ್ನಿಸುತ್ತಿದ್ದುದನ್ನು ಮಾಲಕರ ಸಮಯ ಪ್ರಜ್ಞೆಯಿಂದ ಆರೋಪಿಗಳು ಪೊಲೀಸರ ಬಲೆಗೆ ಬಿದಿದ್ದಾರೆ.

ನ.6ರಂದು ಅಪರಾಹ್ನ 2:30 ಗಂಟೆಗೆ ಅತ್ತೂರು-ನಲ್ಲೂರು ಗ್ರಾಮದ ಮತ್ತಿಕಾಡುವಿನ ಕೋರನ ಕಾಫಿ ತೋಟದ ಮಾಲಕ ಕೆ.ವಿ.ಹೇಮಂತ್ ಅವರ ತೋಟದಿಂದ ಆರೋಪಿಗಳಾದ ಸುಂಟಿಕೊಪ್ಪ ನಿವಾಸಿ ಉಸ್ಮಾನ್ ಅವರ ಮಗ ಎಚ್.ಯು.ಆಶಿಕ್ ಹಾಗೂ ಕಾಸರಗೋಡಿನ ಪಾಡಲಡ್ಕ ಗೊಂಡಿಗಾನದ ಅಬ್ದುಲ್ಲಾ ಎಂಬವರ ಮಗ ಕುಂಞ ಆಹ್ಮದ್ ಬೀಟೆ ಮರವನ್ನು ಕೋಯ್ದುತ್ತಿದ್ದಾಗ ಮಾಲಕರು ಸುಂಟಿಕೊಪ್ಪಠಾಣೆಗೆ ಮಾಹಿತಿ ನೀಡಿದ ಮೇರೆಗೆ ಕುಶಾಲನಗರ ಡಿವೈಎಸ್ಪಿ ಸಂಪತ್ ಕುಮಾರ್, ವೃತ್ತ ನಿರೀಕ್ಷಕ ಕ್ಯಾತೇಗೌಡ ಅವರ ಮಾರ್ಗದರ್ಶನದಲ್ಲಿ ಸುಂಟಿಕೊಪ್ಪಠಾಣಾಧಿಕಾರಿ ಜಯರಾಂ, ಮುಖ್ಯಪೇದೆ ದಯಾನಂದ, ಪೇದೆಗಳಾದ ದಿನೇಶ್, ಪುಂಡಾರಿಕಾಕ್ಷ, ಗಣೇಶ್ ಚಾಲಕ ರವಿ ನೇತ್ರತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿ ಕುಂಞ ಆಹ್ಮದ್ ಅವರು ಮರ ವ್ಯವಹಾರಕ್ಕೆ ತಂದಿದ್ದ 1ಲಕ್ಷದ 10 ಸಾವಿರ ರೂ. ವಶಪಡಿಸಿಕೊಂಡು ಈ ಕೃತ್ಯದ ಬಳಕೆಗೆ ತಂದಿದ್ದ ಇನೋವಾಕಾರು(ಕೆ.ಎಲ್.14ಯು3444)ರನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡು ಆರೋಪಿಗಳನ್ನು ನ್ಯಾಯಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News