ಗದಗ: ಬಸ್ ಹರಿದು ಕೆಎಸ್ಸಾರ್ಟಿಸಿ ಚಾಲಕ ಮೃತ್ಯು
Update: 2017-11-09 18:57 IST
ಗದಗ, ನ.9: ಬಸ್ ಹರಿದು ಕೆಎಸ್ಸಾರ್ಟಿಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರೋಣ ಬಸ್ ಘಟಕದಲ್ಲಿ ನಡೆದಿದೆ.
ಚಾಲಕ ಬಸನಗೌಡ ಮೃತಪಟ್ಟವರೆಂದು ಗುರುತಿಸಲಾಗಿದೆ.
ಬಸನಗೌಡ ಅವರು ದುರಸ್ಥಿಗೆಂದು ತಂದಿದ್ದ ಕೆಎಸ್ಸಾರ್ಟಿಸಿ ಬಸ್ ನ್ನು ಮೆಕ್ಯಾನಿಕ್ ಅಂಗಡಿಯಲ್ಲಿ ಇಟ್ಟು. ಬಸ್ ಹಿಂಬದಿಯಲ್ಲಿ ನಿಂತಿದ್ದರು. ಇದನ್ನು ಗಮನಿಸದ ಮೆಕ್ಯಾನಿಕ್ ಸಿಂಬ್ಬದಿ ಕೆಎಸ್ಸಾರ್ಟಿಸಿ ಬಸ್ ನ್ನು ಚಲಾಯಿಸಿ ಒಮ್ಮೆಲೆ ಹಿಂದೆ ತಿರುಗಿಸಿದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.