ಚೂರಿ ಇರಿತ ಪ್ರಕರಣ: ಇಬ್ಬರ ಬಂಧನ
Update: 2017-11-09 20:25 IST
ಮದ್ದೂರು, ನ.9: ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ಈಚೆಗೆ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಕೆಂಪಯ್ಯ ಮತ್ತು ಅವರ ಅವರ ಪುತ್ರ ರಂಜಿತ್‍ನ್ನು ಪೊಲೀಸರು ಬಂಧಿಸಿದ್ದಾರೆ.
ಅ.23 ರಂದು ಗ್ರಾಮದ ಲೇಟ್ ಚಿಕ್ಕಬೋರೇಗೌಡ ಅವರ ಪುತ್ರ ಮರಿಸ್ವಾಮಿ ಅವರಿಗೆ ಬಂಧಿತ ಆರೋಪಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.