×
Ad

ಟಿಪ್ಪು ಜಯಂತಿ ಕೈಬಿಡಲು ಬಿಜೆಪಿ ಧರಣಿ: ಕಾರ್ಯಕರ್ತರ ಬಂಧನ, ಬಿಡುಗಡೆ

Update: 2017-11-10 18:06 IST

ಮೂಡಿಗೆರೆ, ನ.10: ಟಿಪ್ಪು ಜಯಂತಿ ಆಚರಣೆ ನಡೆಸುವುದನ್ನು ರಾಜ್ಯ ಸರಕಾರ ಕೈಬಿಡಬೇಕೆಂದು ಒತ್ತಾಯಿಸಿ ಬಿಜೆಪಿ ಮತ್ತು ಸಂಘ ಪರಿವಾರ ಕಾರ್ಯಕರ್ತರು ತಾಲೂಕು ಕಚೇರಿ ಆವರಣದಲ್ಲಿ ಕಪ್ಪು ಪಟ್ಟಿ ಧರಿಸುವುದರ ಮೂಲಕ ಧರಣಿ ನಡೆಸಿ, ಸರಕಾರದ ವಿರುದ್ಧ ಘೋಷಣೆ ಕೂಗಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. 

ಈ ವೇಳೆ ಪೊಲೀಸರು ಸ್ಥಳಕ್ಕಾಗಮಿಸಿ  ಧರಣಿನಿರತರರನ್ನು ಪೊಲೀಸರು ಬಂಧಿಸಿ ಸಂಜೆ ಬಿಡುಗಡೆಗೊಳಿಸಿದರು.

 ಧರಣಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ದುಂಡುಗ ಪ್ರಮೋದ್, ಯುವ ಮೋರ್ಚ ಅಧ್ಯಕ್ಷ ಪ್ರವೀಣ್ ಪೂಜಾರಿ, ಎಸ್ಸಿ ಮೋರ್ಚ ಅಧ್ಯಕ್ಷ ಜಯಪಾಲ್, ದೀಪಕ್ ದೊಡ್ಡಯ್ಯ, ಪಪಂ ಸದಸ್ಯೆ ಲತಾ, ವಿಹಿಂಪ ತಾಲೂಕು ಅಧ್ಯಕ್ಷ ಕನ್ನಹಳ್ಳಿ ಭರತ್, ಬಜರಂಗಧಳದ ಸಂಚಾಲಕ ಅವಿನಾಶ್, ಹುಲ್ಲೆಮನೆ ಚಂದ್ರು ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News