ಖಾಸಗಿ ಶಾಲೆಯ ಮುಖ್ಯಸ್ಥನ ಸಾವಿನ ಪ್ರಕರಣಕ್ಕೆ ಹೊಸ ತಿರುವು: ಪತ್ನಿಯಿಂದಲೇ ಪತಿ ಕೊಲೆ
Update: 2017-11-10 20:24 IST
ಮೈಸೂರು, ನ.10: ಖಾಸಗಿ ಶಾಲೆಯ ಮುಖ್ಯಸ್ಥ ನ ಸಾವಿನ ಪ್ರಕರಣಕ್ಕೆ ಸ್ಪೋಟಕ ತಿರುವು ದೊರಕಿದೆ.
2016 ಅಕ್ಟೋಬರ್ 19 ರಂದು ದಟ್ಟಗಳ್ಳಿ ಚಾಣಕ್ಯ ಕೃಷ್ಣ ಎಂಬವರು ಮೃತಪಟ್ಟಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲಾಗಿತ್ತು. ಸಹಜ ಮೃತ್ಯು ಎಂದು ಕೊಂಡಿದ್ದ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು, ಇದೀಗ ಪತ್ನಿಯೇ ಹತೈಗೈದಿದ್ದಾಳೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಕೃಷ್ಣ ಮಲಗಿದ್ದಾಗ ದಿಂಬಿನಿಂದ ಉಸಿರು ಗಟ್ಟಿಸಿ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಕೃಷ್ಣ ನ ಪತ್ನಿ ರಾಧಾ ಹಾಗೂ ಮೂವರು ಸಹಚರರಿಂದ ಕೃತ್ಯ ನಡೆದಿದೆ. ಕೊಲೆಗಾರನ ಬಾಯಿಂದಲೇ ಸತ್ಯ ಹೊರ ಬಂದಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಪೊಲೀಸ್ ವಿಚಾರಣೆ ವೇಳೆ ಆರೋಪಿ ಮಂಜುನಾಥ್ ಎಂಬಾತ ಬಾಯಿ ಬಿಟ್ಟಿದ್ದಾನೆ. ಪತ್ನಿ ರಾಧಾ ತಲೆಮರೆಸಿಕೊಂಡಿದ್ದು, ಆಕೆಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.