ಟಿಪ್ಪು ಮತಾಂದ ಎಂದು ಹೇಳುವವರು ಒಮ್ಮೆ ಇತಿಹಾಸವನ್ನು ತಿಳಿದುಕೊಳ್ಳಲಿ: ತಲಕಾಡು ಚಿಕ್ಕರಂಗೇಗೌಡ
ಮೈಸೂರು,ನ.12: ಟಿಪ್ಪು ಈ ನಾಡು ಕಂಡ ಒಬ್ಬ ದಕ್ಷ ಹೋರಾಟಗಾರ ಆತ ಎಲ್ಲಿಯೂ ತನ್ನ ಸ್ವಾರ್ಥಕ್ಕಾಗಿ ತನ್ನ ರಾಜ್ಯದ ಸಂಪತ್ತನ್ನು ಬಳಸಿಕೊಂಡವನ್ನಲ್ಲ. ಆತ ಪರ್ಶಿಯನ್ ದೇಶದಿಂದ ಬಂದು ನಮ್ಮ ರಾಜ್ಯವನ್ನು ಪಡೆದವನಲ್ಲ ಆತನ ನಾಲ್ಕು ತಲೆಮಾರುಗಳು ಈ ದೇಶದಲ್ಲಿಯೇ ವಾಸವಿದ್ದರು. ಈತ ಮತಾಂದರನಾಗಿದ್ದರೆ. ಮೈಸೂರು ಪ್ರಾಂತ್ಯವನ್ನು ಇಸ್ಲಾಮಿಕರಣ ಮಾಡಬಹುದಿತ್ತು, ಈತ ಸೈನ್ಯದಲ್ಲಿ ಬೆಸ್ತರು, ಸೇರಿದಂತೆ ಅನೇಕ ಹಿಂದುಗಳು ಸೈನಿಕರಾಗಿದ್ದರು. ಈತ ಒಬ್ಬ ಮತಾಂದ ಎಂದು ಹೇಳುವವರು ಒಮ್ಮೆ ಆತನ ಇತಿಹಾಸವನ್ನು ತಿಳಿದುಕೊಂಡು ನಂತರ ಟಿಪ್ಪುವಿನ ಬಗ್ಗೆ ಮಾತನಾಡಬೇಕು ಎಂದು ಲೇಖಕ ತಲಕಾಡು ಚಿಕ್ಕರಂಗೇಗೌಡ ಟಿಪ್ಪು ವಿರೋಧಿಗಳಿಗೆ ತಿರುಗೇಟು ನೀಡಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ರವಿವಾರ ದಲಿತ ವೆಲ್‍ಫೇರ್ ಟ್ರಸ್ಟ್, ರೆಸ್ಪಾನ್ಸಿಬಲ್ ಸಿಟಿಜನ್ ಫೋರಂ, ಆಯೋಜಿಸದ್ದ ಟಿಪ್ಪು ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯಭಾಷಣಕಾರರಾಗಿ ಅವರು ಮಾತನಾಡಿದರು.
ಹಿಂದೆ ಆಡಳಿತ ನಡೆಸಿದ ರಾಜರುಗಳು ಹಿಂದುಳಿದ ವರ್ಗಗಕ್ಕೆ ಸೇರಿದವರಗಾಗಿದ್ದರು. ಪಲ್ಲವರು ಕುರುಬ ಜನಾಂಗಕ್ಕೆ ಸೇರಿದವರಾದರೆ, ಚೋಳರು ಬೆಸ್ತರು, ಕದಂಬರು ಈಡಿಗರು, ಇದರ ಬಗ್ಗೆ ಬಹಳಷ್ಟು ಅಧ್ಯಯನ ನಡೆದಿದೆ. ಪ್ರೊ.ಶೇಕ್ ಅಲಿ ಅವರು ತಮ್ಮ ಪುಸ್ತಕದಲ್ಲಿ ಇದನ್ನು ಬರೆದಿದ್ದಾರೆ. ಕೆಲವು ವಿದ್ವಾಂಸರು ಕದಂಬರು ಬ್ರಾಹ್ಮಣವರ್ಗಕ್ಕೆ ಸೇರಿದವರು ಎಂದು ದಾರಿತಪ್ಪಿಸುತ್ತಿದ್ದಾರೆ. ಈ ಮಹಾನ್ ವಿದ್ವಾಂಸರು ಒಮ್ಮೆ ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡಲಿ ಎಂದು ಹೇಳಿದರು.
ಇಂದು ಹೋರಾಟಗಳು ಕುಸಿಯುತ್ತಿವೆ. ಇವತ್ತು ಹೋರಾಟಗಳು ಎಂದರೆ ರೋಲ್‍ಕಾಲ್ ಎಂಬಂತೆ ಹಾಗಿದೆ. ಅಂದು ದೇಶ ನಾಡಿಗಾಗಿ ಹೋರಾಟ ನಡೆಯುತ್ತಿತ್ತು. ಇಂದು ಸ್ವಾರ್ಥಕ್ಕಾಗಿ ಹೋರಾಟಗಳು ನಡೆಯುತ್ತಿವೆ ಎಂದರು.
ಮಾಜಿ ಸಚಿವೆ ಬಿ.ಟಿ.ಲಲಿತನಾಯಕ್, ಡಾ.ಲಕ್ಷ್ಮೀನಾರಾಯಣ್, ಹೋರಾಟಗಾರ ಡಾ.ಎಸ್.ಮಂಗಳಮೂರ್ತಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕಲೀಂ, ಅಯೂಬ್ ಅನ್ಸಾರಿ ಸಾಹೇಬ್ ಉಪಸ್ಥಿತರಿದ್ದರು.