×
Ad

ಬೆಳಗಾವಿ ಅಧಿವೇಶನಕ್ಕೆ ನಿಯೋಜಿಸಿದ್ದ ಕೆಎಸ್ಸಾರ್ಪಿ ಸಿಬ್ಬಂದಿ ಮೃತ್ಯು

Update: 2017-11-13 18:02 IST

ಬೆಳಗಾವಿ, ನ.13: ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನ ನಮಂಡಲದ ಅಧಿವೇಶನದ ಭದ್ರತೆಗೆ ನಿಯೋಜಿಸಲಾಗಿದ್ದ ಕೆಎಸ್ಸಾರ್ಪಿ ತುಕಡಿಯ ಕಾನ್‍ ಸ್ಟೇಬಲ್‍ ಓರ್ವರು ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ. 

ಶಿವಮೊಗ್ಗ ಕೆಎಸ್ಸಾರ್ಪಿ ತುಕಡಿಯ ಸಿಬ್ಬಂದಿ ತಿಪ್ಪೇಸ್ವಾಮಿ(57) ಮೃತಪಟ್ಟ ಕಾನ್‍ ಸ್ಟೇಬಲ್‍ ಎಂದು ಗುರುತಿಸಲಾಗಿದೆ.

ಸುವರ್ಣ ವಿಧಾನ ಸೌಧದ ಭದ್ರತೆಗೆ ನಿಯೋಜಿಸಲಾಗಿದ್ದ ಕೆಎಸ್ಸಾರ್ಪಿ ತುಕಡಿಯ ಖಾನಾಪುರ ಪಂಚಾಯತ್ ಕಲ್ಯಾಣಮಂಟಪದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಭದ್ರತೆಗಾಗಿ ನಿನ್ನೆಯೇ ಬೆಳಗಾವಿಗೆ ಆಗಮಿಸಿದ್ದ ತುಕಡಿ ಕಲ್ಯಾಣ ಮಂಟಪದಲ್ಲಿ ಬೀಡು ಬಿಟ್ಟಿದ್ದ ಈ ವೇಳೆ ತಿಪ್ಪೇಸ್ವಾಮಿಗೆ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಸಹೋದ್ಯೋಗಿಗಳು ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News