×
Ad

ಕಲ್ಲಿನಿಂದ ಥಳಿಸಿ ವ್ಯಕ್ತಿಯ ಹತ್ಯೆ: ಆರೋಪಿ ಬಂಧನ

Update: 2017-11-13 19:55 IST

ಮಡಿಕೇರಿ, ನ.13: ಮದ್ಯದ ಮತ್ತಿನಲ್ಲಿ ಕಲ್ಲಿನಿಂದ ಥಳಿಸಿ ವ್ಯಕ್ತಿಯೋರ್ವರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.

ದುಷ್ಕೃತ್ಯವೆಸಗಿದ ಕೇರಳದ ತ್ರಿಶೂರ್ ಜಿಲ್ಲೆಯ ನಿವಾಸಿ ಸುಜು ಎಂಬಾತನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. 

ಅಪರಿಚಿತ ವ್ಯಕ್ತಿ 50-55ರ ಪ್ರಾಯದವರಾಗಿದ್ದು, ಗುರುತು ಪತ್ತೆಯಾಗಿಲ್ಲ.

ಕೆಲವು ಸಮಯಗಳ ಹಿಂದೆ ಕೆಲಸಕ್ಕೆಂದು ವೀರಾಜಪೇಟೆಗೆ ಆಗಮಿಸಿದ್ದ ಅಪರಿಚಿತ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದ ಸುಜು, ಆತನಿಗೆ ಕೆಲಸ ನೀಡುವ ಭರವಸೆ ನೀಡಿದ್ದಲ್ಲದೆ ಇವರಿಬ್ಬರು ನಿತ್ಯ ಮದ್ಯ ಸೇವಿಸುತ್ತಿದ್ದರೆನ್ನಲಾಗಿದೆ.

ರವಿವಾರ ಎಂದಿನಂತೆ ಇವರಿಬ್ಬರು ಮದ್ಯ ಸೇವಿಸಿ, ದೊಡ್ಡಟ್ಟಿ ಚೌಕಿಯಿಂದ ಚರ್ಚ್ ಬೀದಿಯಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದಾರೆ. ನಶೆಯ ಮತ್ತಿನಲ್ಲಿ ಇಬ್ಬರು ಕಲಹ ನಡೆಸಿದ್ದು, ಸುಜು ಕಲ್ಲೊಂದರಿಂದ ಅಪರಿಚಿತ ವ್ಯಕ್ತಿಯ ತಲೆಗೆ ಮಾರಣಾಂತಿಕವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ, ಮೃತದೇಹವನ್ನು ಶೌಚಾಲಯದಿಂದ ಹೊರಕ್ಕೆಳೆದು ತಂದು ಪಕ್ಕದ ಪೊದೆಯತ್ತ ಹಾಕಿದ್ದಲ್ಲದೆ, ರಕ್ತಸಿಕ್ತ ಬಟ್ಟೆಯಲ್ಲೆ ಬಳಿಯಲ್ಲಿದ್ದ ಮದ್ಯದಂಗಡಿಗೆ ತೆರಳಿ ಅಲ್ಲಿದ್ದವರಿಗೆ ತಾನು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಸುಜುವನ್ನು ಬಂಧಿಸಿ, ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News