ಮಂಡ್ಯ: ನೀರಿನಲ್ಲಿ ಮುಳುಗಿ ಯುವಕ ಮೃತ್ಯು
Update: 2017-11-13 21:48 IST
ಮಂಡ್ಯ, ನ.13: ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಕಾರಸವಾಡಿ ಗ್ರಾಮದ ದೊಡ್ಡಕೆರೆಯಲ್ಲಿ ಸೋಮವಾರ ನಡೆದಿದೆ.
ನಗರದ ಹೊಸಹಳ್ಳಿ ಬಡಾವಣೆಯ ವೀರಭದ್ರಚಾರಿ ಎಂಬವರ ಪುತ್ರ ನಂದನ್(18) ಮೃತ ಯುವಕ ಎಂದು ಗುರುತಿಸಲಾಗಿದೆ.
ನಂದನ್ ತನ್ನ ಗೆಳೆಯರ ಜತೆ ಬೆಳಗ್ಗೆ ಈಜುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.