ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ವ್ಯಕ್ತಿ ಸಾವು: ಪ್ರತಿಭಟನೆ
ಮೈಸೂರು, ನ.13: ತಲೆಗೆ ಪೆಟ್ಟು ಬಿದ್ದಿದ್ದ ವ್ಯಕ್ತಿಯೋರ್ವ ಖಾಸಗಿ ಆಸ್ಪತ್ರೆಯೊಂದರ ಅವಾಂತರದಿಂದ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ದೊಡ್ಡಖಾನ್ಯದ ರಾಮು ಎಂಬವರು ತೆಂಗಿನ ಮರದಿಂದಿ ಬಿದ್ದು ತಲೆಗೆ ಪೆಟ್ಟಾಗಿತ್ತು. ಕೂಡಲೇ ರಾಮು ಸಂಬಂಧಿಕರು ಸೆಪ್ಟೆಂಬರ್ 4 ರಂದು ಖಾಸಗಿಯ ನಗರದ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲು ಮಾಡಿದ್ದರು. ರಾಮು ಚಿಕಿತ್ಸೆಗಾಗಿ ವೈದ್ಯರು ಅಲ್ಲಲ್ಲೇ ಹಣ ಪಡೆಯುತ್ತಿದ್ದರು. ಸುಮಾರು 5ಲಕ್ಷರೂ. ರಾಮು ಚಿಕಿತ್ಸೆಗೆ ಪಡೆದಿದ್ದರು. ರಾಮುವಿಗೆ ಚಿಕಿತ್ಸೆ ನೀಡುವಾಗ ವೈದ್ಯರು ರಾಮು ಸಂಬಂಧಿಕರಿಗೆ ಗುಣವಾಗುತ್ತಿದ್ದಾರೆ ಎಂದು ಹೇಳುತ್ತಿದ್ದು, ಇದೇ ರೀತಿ ಹೇಳಿ ಮೂರು ತಿಂಗಳು ತಳ್ಳಿದ್ದಾರೆ. ಆದರೂ ರಾಮು ಗುಣಮುಖರಾಗಿಲ್ಲ. ಇಂದು ಬೆಳಗ್ಗೆ 7 ಗಂಟೆಗೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ರಾಮು ಸಾವನ್ನಪ್ಪಿದರೂ ವೈದ್ಯರು ರಾಮು ಸಂಬಂಧಿಕರಿಗೆ ವಿಷಯ ತಿಳಿಸಿಲ್ಲ. ರಾಮು ಸಂಬಂಧಿಕರಿಂದ ಆಸ್ಪತ್ರೆ ಮುಂದೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ರಾಮು ಸಾವನ್ನಪ್ಪಲು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ.
ಸ್ಥಳಕ್ಕೆ ಕೆಆರ್ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ತಹಂಬದಿಗೆ ತಂದರು.