ಸಮುದ್ರ ದಾಟಲು ಪ್ಲಾಸ್ಟಿಕ್ ಡಬ್ಬ..!
Update: 2017-11-13 23:34 IST
ಮ್ಯಾನ್ಮಾರ್‌ನಲ್ಲಿ ಹೆಚ್ಚುತ್ತಿರುವ ರೊಹಿಂಗ್ಯಾ ವಿರೋಧಿ ಹಿಂಸಾಚಾರದಿಂದ ಕಂಗೆಟ್ಟಿರುವ ರೊಹಿಂಗ್ಯಾ ಮುಸ್ಲಿಮರು ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಿ ಸಮುದ್ರ ದಾಟಿ ಬಾಂಗ್ಲಾದೇಶಕ್ಕೆ ಬರುತ್ತಿದ್ದಾರೆ. ಇತ್ತೀಚೆಗೆ 13 ವರ್ಷದ ಬಾಲಕ ನಬಿ ಹುಸೈನ್ ಪ್ಲಾಸ್ಟಿಕ್ ತೈಲ ಡಬ್ಬವನ್ನು ಬಳಸಿ ಬಾಂಗ್ಲಾದೇಶಕ್ಕೆ ಬರುವ ಮೂಲಕ ತನ್ನ ಜೀವ ಉಳಿಸಿಕೊಂಡಿದ್ದಾನೆ. ಅವನಿಗೆ ಈಜಲು ಗೊತ್ತಿರಲಿಲ್ಲ ಹಾಗೂ ಮ್ಯಾನ್ಮಾರ್‌ನಲ್ಲಿನ ತನ್ನ ಗ್ರಾಮದಿಂದ ಪಲಾಯನಗೈಯುವ ಮೊದಲು ಸಮುದ್ರವನ್ನೂ ನೋಡಿರಲಿಲ್ಲ. ಆದರೆ, ಖಾಲಿ ಪ್ಲಾಸ್ಟಿಕ್ ಡಬ್ಬವನ್ನು ಹಿಡಿದುಕೊಂಡ ಅವನು ಬಂಗಾಳ ಕೊಲ್ಲಿಯಲ್ಲಿ 4 ಕಿ.ಮೀ. ದಾಟಿ ಬಾಂಗ್ಲಾದೇಶಕ್ಕೆ ಬಂದನು.