ಶಿವಮೊಗ್ಗ: ಶರೀಅತ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

Update: 2017-11-13 18:17 GMT

ಶಿವಮೊಗ್ಗ, ನ. 13: ನಗರದ ಬೈಪಾಸ್ ರಸ್ತೆಯ ವಾದಿ ಎ ಹುದಾದಲ್ಲಿರುವ ಮರ್ಕಝ್ ಸಆದ ಫೌಂಡೇಶನ್ ಆವರಣದಲ್ಲಿ ಸೋಮವಾರ ನೂತನ ಮಸೀದಿ ಉದ್ಘಾಟನೆ ಹಾಗೂ ಮಹಿಳಾ ಶರೀಅತ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಮರ್ಕಝ್ ಸಆದ ಜನರಲ್ ಮ್ಯಾನೇಜರ್ ಬಿ. ಅಬ್ದುಲ್ ಲತೀಫ್ ಸಅದಿ ಮಾತನಾಡಿ, ಶಿಕ್ಷಣವು ಸಾಂಸ್ಕೃತಿಕ ತಳಹದಿಯ ಮೇಲೆ ರೂಪಗೊಳ್ಳಬೇಕು. ಆಗ ಇಂದಿನ ಆಧುನಿಕ ತಂತ್ರಜ್ಞ್ಞಾನದ ಸಮಸ್ಯೆಗಳಿಂದ ಯುವ ಜನತೆಯನ್ನು ಪಾರು ಮಾಡಲು ಸಾಧ್ಯ ಎಂದು ತಿಳಿಸಿದರು.

ಅಖಿಲ ಭಾರತ ಮುಸ್ಲಿಂ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕರ್ ಮುಸ್ಲಿಯಾರ್, ಮರ್ಕಝ್ ಸಆದ ಅಧ್ಯಕ್ಷ ಸೈಯದ್ ಶಹೀದುದ್ದೀನ್ ಅಲ್ ಬುಖಾರಿ, ಪ್ರಮುಖರಾದ ಇಕ್ಬಾಲ್ ಶೇಠ್, ಅನ್ವರ್, ಕಲೀಂ ಪಾಷಾ, ಆರಿಸ್ ಖಾನ್, ಸೈಯದ್ ಗಫೂರ್, ಹಬೀಬ್, ಸಮೀವುಲ್ಲಾ ಮತ್ತಿತರರು ಉಪಸ್ಥಿತರಿದ್ದರು. ವಾದಿ ಎ ಹುದಾ ಬಡಾವಣೆಯ ನೂತನ ಮಸೀದಿಯ ಸಮೀಪ ಸಂಜೆ ಬೃಹತ್ ಸಾರ್ವಜನಿಕ ಸಭೆ ನಡೆಯಿತು.

ಸಭೆಯಲ್ಲಿ ಅಖಿಲ ಭಾರತ ಮುಸ್ಲಿಂ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್, ಡಾ. ಅಬ್ದುಲ್ ಹಕೀಂ ಅಝ್‌ಹರಿ, ಡಾ. ಹುಸೈನ್ ಸಖಾಫಿ, ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಮತ್ತು ಎನ್.ಕೆ.ಎಂ.ಶಾಫಿ, ಸಚಿವ ಯು.ಟಿ. ಖಾದರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News