×
Ad

ಟಿಪ್ಪು ಚರಿತ್ರೆ ಬ್ರಿಟಿಷರಿಂದ ತಿರುಚಲಾಗಿದೆ: ಮೌಲಾನಾ ಹುಸೈನ್ ಸಅದಿ

Update: 2017-11-15 23:32 IST

ಚಿಕ್ಕಮಗಳೂರು, ನ.15: ನಗರದ ಎಸ್ಸೆಸ್ಸೆಫ್ ಡಿವಿಶನ್ ವತಿಯಿಂದ ಎಸ್ಸೆಸ್ಸೆಫ್ ಭವನದಲ್ಲಿ ಟಿಪ್ಪುಸುಲ್ತಾನ್ ಕುರಿತು ಗುರುವಾರ ವಿಚಾರಗೋಷ್ಠಿ ನಡೆಯಿತು.

ಈ ವೇಳೆ ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಸದಸ್ಯ ಮೌಲಾನಾ ಹುಸೈನ್ ಸಅದಿ ಮಾತನಾಡಿ, ಟಿಪ್ಪುವಿನ ಚರಿತ್ರೆಯನ್ನು ಬ್ರಿಟಿಷರು ತಿರುಚಿದ್ದಾರೆ.

ಟಿಪ್ಪುತಮ್ಮ ಆಡಳಿತವಾಧಿಯಲ್ಲಿ ಹಲವಾರು ದೇವಸ್ಥಾನಗಳನ್ನು ಕಟ್ಟಿಸಿದ್ದಾನೆ. ದೇವಾಲಯಗಳ ಜೀರ್ಣೋದ್ಧಾರಕ್ಕೆ ಧನ-ಕನಕ ಸಹಕಾರ ನೀಡಿದ್ದಾರೆ. ಹೀಗಿರುವಾಗ ಅವರು ಹಿಂದುಗಳನ್ನು ಕೊಲ್ಲುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಟಿಪ್ಪುಮಂತ್ರಿ ಮಂಡಳದಲ್ಲಿ ಬಹುತೇಕರು ಹಿಂದೂಗಳೆ ಆಗಿದ್ದರು. ಹಾಗಾಗಿ ನಿಜವಾದ ಚರಿತ್ರೆಯನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದರು.

ಡಿವಿಷನ್ ಅಧ್ಯಕ್ಷ ರಪೀಖ್ ಸಖಾಫಿ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಮಾಜಿ ಜಿಲ್ಲಾಧ್ಯಕ್ಷ ಕೆ.ಪಿ.ಅಬೂಬಕ್ಕರ್, ಎಸ್‌ಜೆಎಂ ಚಿಕ್ಕಮಗಳೂರು ರೇಂಜ್ ಅಧ್ಯಕ್ಷ ಇಬ್ರಾಹೀಂ ಸಅದಿ, ಜಿಲ್ಲಾ ಸದಸ್ಯ ಸಪ್‌ವಾನ್, ಮುಸ್ತಪ ಝುಹ್ರಿ, ಇಸ್ಮಾಯೀಲ್ ಲತೀಫಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News