×
Ad

ಡಿಸೆಂಬರ್ ವೇಳೆಗೆ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಎಂಆರ್‍ಐ, ಸಿಟಿ ಸ್ಕ್ಯಾನ್ ವ್ಯವಸ್ಥೆ: ರಮೇಶ್ ಕುಮಾರ್

Update: 2017-11-16 18:28 IST

ಬೆಳಗಾವಿ, ನ.16: ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಡಿಸೆಂಬರ್ ವೇಳೆಗೆ ಎಂಆರ್‍ಐ ಮತ್ತು ಸಿಟಿ ಸ್ಕ್ಯಾನ್ ವ್ಯವಸ್ಥೆಯನ್ನು ರಿಯಾಯಿತಿ ದರದಲ್ಲಿ ಒದಗಿಸುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಮಸೂದೆಯನ್ನು ವಿರೋಧಿಸಿ ವೈದ್ಯರು ಮುಷ್ಕರ ಮಾಡುತ್ತಿದ್ದಾರೆ. ಅವರ ಜತೆ ಪ್ರಯೋಗಾಲಯಗಳಿಗೆ ಸಂಬಂಧಿಸಿದವರು ಸೇರಿ ಮುಷ್ಕರಕ್ಕೆ ಮುಂದಾಗಿರುವುದು ಏಕೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಮಸೂದೆಯಲ್ಲಿ ಪ್ರಯೋಗಾಲಯಗಳಿಗೆ ಸಂಬಂಧಪಟ್ಟ ಯಾವ ಅಂಶಗಳು ಇಲ್ಲ. ಆದರೂ, ಮುಷ್ಕರ ವೈದ್ಯರ ಜತೆ ಪ್ರಯೋಗಾಲಯಗಳ ಮಾಲಕರು ಮತ್ತು ಸಿಬ್ಬಂದಿಗಳೂ ಸೇರಿದ್ದಾರೆ. ಇದು ದುರುದ್ದೇಶ ಪೂರಿತ. ರಾಜ್ಯ ಸರಕಾರ ಡಿಸೆಂಬರ್ ವೇಳೆಗೆ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಎಂಆರ್‍ಐ ಮತ್ತು ಸಿಟಿ ಸ್ಕ್ಯಾನ್ ಸೇವೆಯನ್ನು ಒದಗಿಸಲು ಕ್ರಮ ಕೈಗೊಂಡಿದೆ ಎಂದ ಅವರು, ತಾಲೂಕು ಆಸ್ಪತ್ರೆಗಳಲ್ಲಿ ಉಚಿತವಾಗಿ ಡಯಾಲಿಸಿಸ್ ಸೇವೆ ಒದಗಿಸಲಾಗುವುದು. ಖಾಸಗಿ ಪ್ರಯೋಗಾಲಯಗಳು ಡಯಾಲಿಸಿಸ್‍ಗೆ 8 ಸಾವಿರ ರೂ.ವಸೂಲಿ ಮಾಡುತ್ತಿವೆ. ಆ ಸೇವೆಯನ್ನು ಜನರಿಗೆ ನಾವು ಉಚಿತವಾಗಿ ನೀಡಲು ಮುಂದಾಗಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News