ಸಾಲಭಾದೆ: ರೈತ ಆತ್ಮಹತ್ಯೆ
Update: 2017-11-16 21:50 IST
ಮಂಡ್ಯ, ನ.16: ಸಾಲ ಬಾಧೆಯಿಂದ ಯುವ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮದ್ದೂರು ತಾಲೂಕಿನ ಬಿದರಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾಗರಾಜು ಎಂಬವರ ಪುತ್ರ ಎಚ್.ಎನ್.ಸಿದ್ದರಾಜು ಅಲಿಯಾಸ್(27) ಆತ್ಮಹತ್ಯೆ ಮಾಡಿಕೊಡ ರೈತ ಎಂದು ಗುರುತಿಸಲಾಗಿದೆ.
ಈತ ಬುಧವಾರ ಬೆಳಗ್ಗೆ ಜಮೀನನ ಬಳಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಸಿದ್ದರಾಜು, ಚಿಕಿತ್ಸೆ ಫಲಕಾರಿಯಾಗದೆ ಅಂದೇ ತಡರಾತ್ರಿ ಮೃತಪಟ್ಟಿದ್ದಾರೆ.
ತಂದೆಯ ಹೆಸರಿನಲ್ಲಿ ಇದ್ದ 6 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಸಿದ್ದರಾಜು, ಕೃಷಿ ಚಟುವಟಿಕೆಗಾಗಿ ಸುಮಾರು 8 ಲಕ್ಷ ರೂ. ಸಾಲಮಾಡಿಕೊಂಡಿದ್ದ ಎನ್ನಲಾಗಿದೆ.
ಕೆ.ಎಂ.ದೊಡ್ಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.