×
Ad

ರಾಮಪುರ ಹೋಬಳಿಯ ಎರಡು ವಸತಿ ಶಾಲೆಗಳಿಗೆ ಅನುದಾನ ಮಂಜೂರು: ಆಂಜನೇಯ

Update: 2017-11-16 22:43 IST

ಹನೂರು, ನ.16: ಬೆಳಗಾವಿಯಲ್ಲಿ ನೆಡಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಆರ್.ನರೇಂದ್ರ ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ರಾಮಪುರ ಹೋಬಳಿಯ ಪರಿಶಿಷ್ಟ ಜಾತಿ ಮೊರಾರ್ಜಿದೇಸಾಯಿ ವಸತಿ ಶಾಲೆ, ಪಾಳ್ಯ ಹೋಬಳಿಯ ಪರಿಶಿಷ್ಟ ವರ್ಗಗಳ ಮೊರಾರ್ಜಿದೇಸಾಯಿ ವಸತಿ  ಶಾಲೆಗಳ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಸರ್ಕಾರ ಕೈ ಗೂಂಡಿರುವ ಕ್ರಮಗಳೇನು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಸ್. ಆಂಜನೇಯವರಲ್ಲಿ ಪ್ರಶ್ನಿಸಿದರು.

ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಎರಡು ವಸತಿ ಶಾಲೆಗಳಿಗೆ ಸರಕಾರ ಈಗಾಗಲೇ ಅನುದಾನ ಮಂಜೂರು ಮಾಡಿದೆ. ರಾಮಾಪುರ ವಸತಿ ಶಾಲೆಯ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲು 17.22 ಕೋಟಿ ರೂ. ಅಂದಾಜು ಪಟ್ಟಿಯನ್ನು ತಯಾರಿಸಿದ್ದು, ಪಾಳ್ಯ ಹೋಬಳಿಯ ವಸತಿ ಶಾಲೆಗೂ ಸ್ವಂತ ಕಟ್ಟಡ ನಿರ್ಮಿಸಲು16.55 ಕೋಟಿ ರೂ.ಗೆ ಅಂದಾಜು ಪಟ್ಟಿ ತಯಾರಿಸಲಾಗಿದೆ. ಇದು ಆಡಳಿತಾತ್ಮಕ ಅನುಮೋದನೆ ನೀಡುವ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಆಡಳಿತಾತ್ಮಕ ಅನುಮೋದನೆ ನಂತರ ನಿಯಾಮನುಸಾರ ಟೆಂಡರ್ ಕರೆದು ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News