×
Ad

ಗೋ ಮಧಸೂಧನ್ ವಿರುದ್ಧ ಮೂರನೆ ದಿನಕ್ಕೆ ಕಾಲಿಟ್ಟ ದಸಂಸ ಪ್ರತಿಭಟನೆ

Update: 2017-11-16 22:56 IST

ಮೈಸೂರು, ನ.16: ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಖಾಸಗಿ ಸುದ್ದಿವಾಹಿನಿಯಲ್ಲಿ  ಹೇಳಿಕೆ  ನೀಡಿದ್ದ ಗೋ.ಮಧುಸೂಧನ್ ವಿರುದ್ಧ ಎಫ್‍ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿ ನಡೆಸುತ್ತಿರುವ ದಲಿತ ಸಂಘಟನೆಗಳ ಪ್ರತಿಭಟನೆ ಮೂರನೆ ದಿನಕ್ಕೆ ಕಾಲಿಟ್ಟಿದ್ದು, ಪೊಲೀಸ್ ಠಾಣೆಯ ಮುಂದೆಯೇ ಅಡುಗೆ ಮಾಡಿಕೊಂಡು ಊಟ ಮಾಡಿ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.

ನಗರದ ಕೆ.ಆರ್.ಪೊಲೀಸ್ ಠಾಣೆ ಮುಂಭಾಗ ಗುರುವಾರ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ, ದಲಿತ ಸಂಘರ್ಷ ಸಮಿತಿ, ದಲಿತ ವೆಲ್‍ಫೇರ್ ಟ್ರಸ್ಟ್, ಜನಸಂಗ್ರಾಮ ಪರಿಷತ್, ಮೈಸೂರು ವಿವಿ ದಲಿತ ವಿದ್ಯಾರ್ಥಿ ಸಂಘಗಳು ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿ ಅಪಮಾನ ಮಾಡಿರುವ ಗೋ.ಮಧುಸೂಧನ್ ವಿರುದ್ಧ ಎಫ್‍ಐಆರ್ ದಾಖಲಿಸಬೇಕು ಆತನನ್ನ ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನಕಾರರು ತ್ತಾಯಿಸಿದರು.

ನಂತರ ಗೋ.ಮಧುಸೂಧನ್ ಚಟ್ಟಕಟ್ಟಿ ಕೆ.ಆರ್.ಪೊಲೀಸ್ ಠಾಣೆ ಯಿಂದ ಮೆರವಣಿಗೆ ಹೊರಟು ಅಗ್ರಹಾರ ವೃತ್ತ ಬಳಿಸಿಕೊಂಡು ಮತ್ತೆ  ಪ್ರತಿಭಟನೆ ಸ್ಥಳಕ್ಕೆ ಬಂದು ಧಿಕ್ಕಾರ ಕೂಗಿದರು. 

ಓರ್ವ ಸಾಮನ್ಯ ವ್ಯಕ್ತಿ, ಒಬ್ಬ ಮುಖ್ಯಮಂತ್ರಿಯೂ ಅಥವಾ ಸಚಿವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸಾಕು ಆತನ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತಾರೆ. ಆದರೆ ಇಡೀ ವಿಶ್ವವೇ ಒಪ್ಪುವಂತಹ ಸಂವಿಧಾನ ನೀಡಿ ಈ ದೇಶಕ್ಕೆ ಬೆಳಕು ನೀಡಿರುವ ಬಾಬಾ ಸಾಹೇಬ್ ಅಂಭೇಡ್ಕರ್ ಅವರ ಸಂವಿಧಾನವನ್ನು ಒಪ್ಪುವುದಿಲ್ಲ ಎಂದು ಸುದ್ದಿ ವಾಹಿನಿಯೊಂದರಲ್ಲಿ ಹೇಳಿಕೆ ನೀಡಿರುವ ಮಧುಸೂಧನ್ ಅಂಹವನನ್ನು ಬಂಧಿಸಲು ಹಿಂದೇಟು ಏಕೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಇಂತಹ ಹೇಳಿಕೆ ನೀಡಿರು ಮಧುಸೂಧನ್  ರಾಷ್ಟ್ರದ್ರೋಹಿ, ಇಂತಹವನ  ರಕ್ಷಣೆಗೆ ನಿಂತಿರುವ ಎಲ್ಲರೂ ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಮೂರು ದಿನಗಳಿಂದ ಸತತವಾಗಿ ಪ್ರತಿಭಟನೆ ಮಾಡುತ್ತಿದ್ದರು ಪೊಲೀಸರು ಇದುವರೆಗೂ ಆತನ ಮೇಲೆ ಕ್ರಮವಹಿಸದೆ ಉದಾಸೀನ ತೋರುತ್ತಿದ್ದಾರೆ. ಈತ ಹಿಂದೆ ಯಾವ ಶಕ್ತಿ ನಿಂತಿದೆ ಎಂಬುದೇ ಗೊತ್ತಿಲ್ಲ, ಈತನ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರೇಕೆ ಎದುರುತಿದ್ದಾರೆ ಎಂಬುದೇ  ಅರ್ಥವಾಗುತ್ತಿಲ್ಲ ಎಂದು ದೂರಿದರು.

ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ಇನ್ನು ವಿಭಿನ್ನ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ.  ಮುಂದೆ ಯಾವುದೇ ಅನಾಹುತಗಳು ಸಂಭವಿಸಿದರೂ ಸರ್ಕಾರವೇ ಹೊಣೆಯಾಗುತ್ತದೆ ಎಂದು ಗುಡುಗಿದರು.
ದಲಿತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಪ್ರಗತಿಪರ ಚಿಂತಕ ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಎಸ್‍ಡಿಪಿಐ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಪಾಲ್ಗೊಂಡು ಬೆಂಬಲ ಸೂಚಿಸಿದರು.

ಇದಕ್ಕೂ ಮೊದಲು ನಿನ್ನೆ ನಿಧನರಾಗಿದ್ದ  ದಲಿತ ಸಂಘಟನೆಯ ಮುಖಂಡ ಹೂಟಗಳ್ಳಿಯ ಶಿವಸಿದ್ಧು ಅವರ ಸಾವಿಗೆ ಸಂತಾಪ ಸೂಚಿಸಿದರು.
ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಸಂಚಾಲಕ ಎನ್.ಭಾಸ್ಕರ್, ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಮಾಜಿ ಮೇಯರ್ ಪುರುಷೋತ್ತಮ್, ದಲಿತ ಸಂಘಟನೆ ಮುಖಂಡರಾದ ಹರಿಹರ ಆನಂದಸ್ವಾಮಿ, ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ಬೊಕ್ಕಳ್ಳಿ ಮಹದೇವಸ್ವಾಮಿ, ಗಂಗಾಧರ, ಶಂಕರ ಬಸ್ತಿಪುರ, ಕುಮಾರ ಕಲ್ಲಹಳ್ಳಿ, ಸೋಮ ಹಿನಕಲ್, ರಾಜರತ್ನಂ, ಅಂದಾನಿ, ಶಿವಶಂಕರ್, ಮೂರ್ತಿ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News