×
Ad

ಹನೂರು: 'ಜನ ಸಂಪರ್ಕ' ಸಭೆ

Update: 2017-11-16 23:04 IST

ಹನೂರು, ನ.16: ಕಾಡಂಚಿನ ಗ್ರಾಮಗಳಲ್ಲಿ ವಾಸವಾಗಿರುವ ಗಿರಿಜನರಿಗೆ ಸರ್ಕಾರದಿಂದ ದೊರಕುವ ಮೂಲ ಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವುದಕ್ಕೆ ಮತ್ತು ಗ್ರಾಮಸ್ಥರಿಗೆ ತಾಲೂಕು ಮಟ್ಟದ ಎಲ್ಲಾ ಇಲಾಖೆವಾರು ಮಾಹಿತಿಗಳನ್ನು ನೀಡಲು ಜನ ಸಂಪರ್ಕ ಸಭೆಯ ಮೂಲ ಧ್ಯೇಯವಾಗಿದೆ ಎಂದು ಹನೂರು ವಿಶೇಷ ತಹಿಶೀಲ್ದಾರ್ ಎಂ.ಸಿ ಮಹದೇವಸ್ವಾಮಿ ತಿಳಿಸಿದ್ದಾರೆ.

ತಾಲೂಕಿ ಲೋಕ್ಕನಹಳ್ಳಿ ಜಿಲ್ಲಾ ಪಂಚಾಯತ್ ನ ಹೋಸಪೋಡು ಗ್ರಾಮದಲ್ಲಿ ತಾಲೂಕು ಆಡಳಿತ ವತಿಯಂದ ಆಯೋಜಿಸಿದ್ದ 'ಜನ ಸಂಪರ್ಕ' ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿ ಬಂದಿರುವಂತಹ ಗಿರಿಜನರಿಗೆ ಮೂಲಸೌಕರ್ಯಗಳಾದ ವಸತಿ, ಶಿಕ್ಷಣ, ವಿದ್ಯುತ್ ರಸ್ತೆ, ಹಾಗೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಅಧಿಕಾರಿಗಳು ಬದ್ಧರಾಗಿದ್ದು, ಎಲ್ಲಾ ಸೌಲಭ್ಯಗಳನ್ನು ಪಡೆದುಕೂಳ್ಳಬೇಕೆಂದು ಮನವಿ ಮಾಡಿದರು.

ಸಮಾಜ ಕಲ್ಯಾಣ ಅಧಿಕಾರಿ ಮಾತನಾಡಿ, ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಗಿರಿಜನರು ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಹಾನಿ  ಹಾಗೂ ಪ್ರಾಣಪಾಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದರಿಂದ, ಇದ್ದನ್ನು ತಪ್ಪಿಸಲು ಹಾಗೂ ಗಿರಿಜನರು ಆರ್ಥಿಕವಾಗಿ ಸಧೃಡಗೂಳ್ಳಲು ಕಾಫಿ ಬೆಳೆಯನ್ನು ಬೆಳೆಯುವುದರ ಕಡೆ ಮುಖ ಮಾಡಬೇಕೆಂದು ಎಂದು ಸಲಹೆ ನೀಡಿದರು.

ಸಭೆಯಲ್ಲಿ ತಾಲುಕು ಪಂಚಾಯತ್ ಸದಸ್ಯೆ ಶಿವಮ್ಮ, ತಾಲೂಕು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪ್ರಕಾಶ್, ತಾಲೂಕು ಆರೋಗ್ಯ ಅಧಿಕಾರಿ ಗೋಪಾಲ್, ಪಶು ವೈದ್ಯಾಧಿಕಾರಿ ವೆಂಕಟರಮಣ, ಸಹಾಯಕ ಕೃಷಿ ನಿರ್ದೇಶಕ ಮಹದೇವು ,ಕೃಷಿ ಅಧಿಕಾರಿ ಎಸ್.ದೊರೈರಾಜ್, ಗ್ರಾಮ ಲೆಕ್ಕ ಅಧಿಕಾರಿ ಕಾರ್ತಿಕ್ ಇನ್ನಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News