ಶರೀಫ್, ಕುಟುಂಬ ಸದಸ್ಯರ ವಿದೇಶ ಪ್ರಯಾಣಕ್ಕೆ ನಿರ್ಬಂಧ

Update: 2017-11-18 16:35 GMT

ಇಸ್ಲಾಮಾಬಾದ್,ನ.18: ಪನಾಮಾ ಪೇಪರ್ಸ್‌ ಹಗರಣದಲ್ಲಿ ಆರೋಪಿಗಳಾಗಿರುವ ಪಾಕ್ ಪ್ರಧಾನಿ ನವಾಝ್ ಶರೀಫ್ ಹಾಗೂ ಅವರ ಕುಟುಂಬದ ನಾಲ್ವರು ಸದಸ್ಯರು ದೇಶ ಬಿಟ್ಟು ತೆರಳುವುದನ್ನು ಶೀಘ್ರವೇ ನಿಷೇಧಿಸಲಾಗುವುದೆಂದು ಅಧಿಕೃತ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಕಾವಲು ದಳವು,ಈ ಐದು ಮಂದಿಯ ಹೆಸರುಗಳನ್ನು, ನಿರ್ಗಮನ ನಿಯಂತ್ರಣ ಪಟ್ಟಿ (ಇಸಿಎಲ್)ಯಲ್ಲಿ ಸೇರ್ಪಡೆಗೊಳಿಸಲು ಉಪಕ್ರಮಿಸಿದೆಯೆಂದು ಮಾಧ್ಯಮ ವರದಿಯೊಂದು ಶನಿವಾರ ತಿಳಿಸಿದೆ.

  67 ವರ್ಷದ ಶರೀಫ್ ಹಾಗೂ ಅವರ ಕುಟುಂಬಿಕರು ಲಂಡನ್‌ನಲ್ಲಿ ಆಕ್ರಮ ಆಸ್ತಿಗಳನ್ನು ಸಂಪಾದಿಸಿರುವ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅಘೋಷಿತ ಆದಾಯವನ್ನು ಹೊಂದಿದ ಆರೋಪದಲ್ಲಿ ಪಾಕ್ ಸುಪ್ರೀಂಕೋರ್ಟ್ ಶರೀಫ್ ರನ್ನು ಅನರ್ಹಗೊಳಿಸಿದ್ದರಿಂದ ಅವರು ಜುಲೈನಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು.

 ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ಶರೀಫ್ ಹಾಗೂ ಅವರ ಮಕ್ಕಳು ಮತ್ತು ಅಳಿಯನ ವಿರುದ್ಧ ರಾಷ್ಟ್ರೀಯ ಉತ್ತರದಾಯಿತ್ವ ಇಲಾಖೆ (ಎನ್‌ಎಬಿ) ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.

ಒಂದು ವೇಳೆ ಶರೀಫ್ ಕುಟುಂಬವು ನಿರ್ಗಮನ ನಿಯಂತ್ರಣ ಪಟ್ಟಿಯಲ್ಲಿ ಸೇರ್ಪಡೆಗೊಂಡಲ್ಲಿ ಅವರು ವಿದೇಶಕ್ಕೆ ಪ್ರಯಾಣಿಸುವುದು ಸಾಧ್ಯವಾಗದು ಎಂದು ಎನ್‌ಎಬಿ ಇಲಾಖೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News