×
Ad

ಮೈಸೂರು ಜಿಲ್ಲಾ ಕಸಾಪ ವಿರುದ್ಧ ಲೋಕಾಯುಕ್ತಕ್ಕೆ ಸಾಹಿತಿ ಬನ್ನೂರು ಕೆ.ರಾಜು ದೂರು

Update: 2017-11-18 23:11 IST

ಮೈಸೂರು, ನ.18: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ನಡೆದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕಸಾಪ, ಜಿಲ್ಲಾಡಳಿ ಮತ್ತು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿರುದ್ಧ ಸಾಹಿತಿ ಬನ್ನೂರು ಕೆ.ರಾಜು ಅವರು, ಕ್ರಮ ಕೈಗೊಳ್ಳುವಂತೆ ಹಲವಾರು ಭಾರಿ ಜಿಲ್ಲಾಧಿಕಾರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದ್ದರೂ ಕಸಾಪ ವಿರುದ್ಧ ಯವುದೇ ಕ್ರಮ ವಹಿಸದಿರು ಹಿನ್ನಲೆಯಲ್ಲಿ ಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರವನ್ನು ತನಿಖೆಗೆ ಆದೇಶಿಸಿ ನಂತರ 83ನೆ ಅಖಿಲ ಭಾರತ ಕನ್ನಡ ಈ ದೂರನ್ನು ನೀಡಿರುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಮೈಸೂರು ಕಸಾಪ ಕಳೆದ 15 ವರ್ಷಗಳಿಂದ ಭ್ರಷ್ಟಾಚಾರ ನಡೆಸುತ್ತಾ ಬಂದಿದ್ದು, ಈ ಸಂಬಂಧ ಹಲವಾರು ಭಾರಿ ಸಂಬಂಧಪಟ್ಟವರಿಗೆ ದೂರು ನೀಡಿದ್ದರು ಯಾವುದೇ ಕ್ರಮ ವಹಿಸಿಲ್ಲ. ಪ್ರಸ್ತುತ ಕಸಾಪ ಅಧ್ಯಕ್ಷರಾಗಿರುವ ವೈ.ಡಿ.ರಾಜಣ್ಣ ಒಬ್ಬ ಸರ್ಕಾರಿ ನೌಕರ. ಆತ ಪಶುವೈಧ್ಯ ಇಲಾಖೆಯ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಸರ್ಕಾರಿ ಕೆಲಸಕ್ಕೆ ಹಾಜರಾಗದೆ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 
ಕನ್ನಡ ಸಾಹಿತ್ಯ ಭವನವನ್ನು ಮೈಸೂರಿನಲ್ಲಿ ನಿರ್ಮಾಣ ಮಾಡಿದ್ದು, ಅಲ್ಲಿ ಯಾವುದೇ ಸಾಹಿತ್ಯಾತ್ಮಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಅಲ್ಲಿ ಇರುವ ಭವನ ಮತ್ತು ಮಳಿಗೆಗಳ ಬಾಡಿಗೆಯನ್ನು ಸಾಹಿತ್ಯ ಪರಿಷತ್ತಿನವರು ನುಂಗಿ ನೀರು ಕುಡಿಯುತ್ತಿದ್ದಾರೆ ಎಂದು ಆರೋಪಿಸಿದರು.

 2015  ರಲ್ಲಿ ಕೆ.ಆರ್.ನಗರ ದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನ ನಡೆದಿದಿ ಎಂದು ಹಣ ಪಡೆದು ಲಪಟಾಯಿಸಿದ್ದಾರೆ. ಹಾಗಾಗಿ ಇವರ ನೇತೃತ್ವದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವ ಮೊದಲು ಇವರು ಹಿಂದೆ ಮಾಡಿರುವ ಹಗರಣಗಳನ್ನು ತನಿಖೆಗೆ ಒಪ್ಪಿಸಿ ನಂತರ ಸಮ್ಮೇಳನ ನಡೆಸಿ ಎಂದು  ಹಲವು ಬಾರಿ ಲಿಖಿತ ದೂರು ನೀಡಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಹಾಗಾಗಿ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ದಲಿತ ಸಾಹಿತಿ ಮುನಿವಂಕಟಪ್ಪ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ನಾ.ಲಾ.ಬೀದಿ ರವಿ, ರಾಧಾಕೃಷ್ಣ, ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News