ಹನೂರು: ಜನ ಸಂಪರ್ಕ ಸಭೆ

Update: 2017-11-18 17:53 GMT

ಹನೂರು, ನ.18: ವಿದ್ಯುತ್ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ವಿದ್ಯುತ್ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಕ್ರಮವಹಿಸಬೇಕು. ಈಗಾಗಲೇ ಅಹವಾಲು ಬಂದಿರುವ ಸಮಸ್ಯೆಗಳನ್ನು ಮುಂದಿನ ಜನಸಂಪರ್ಕ ಸಭೆಯಲ್ಲಿ ಬಗೆಹರಿಸಬೇಕೆಂದು ಅಧೀಕ್ಷಕ ಅಭಿಯಂತರ ರಾಮಚಂದ್ರು ಅಧಿಕಾರಿಗಳಿಗೆ ತಾಕಿತು ಮಾಡಿದ್ದಾರೆ.

ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪವಿಭಾಗ ಹನೂರು ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ನಂತರ ಮಾತನಾಡಿದ ಅವರು, ಕಳೆದ ಬಾರಿಯಲ್ಲಿ ಸಾರ್ವಜನಿಕರಿಂದ ದಾಖಲಿಸಲಾಗಿದ್ದ ವಿದ್ಯುತ್ ಸಮಸ್ಯೆಗಳ ದೂರುಗಳಲ್ಲಿ ಶೇ. 90 ರಷ್ಟು ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಐದು ಗ್ರಾಮಗಳನ್ನು ಆಯ್ಕೆ ಮಾಡಿಕೂಂಡು ಅದನ್ನು ಮಾದರಿ ಗ್ರಾಮಗಳನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ಪಟ್ಟಣ ಪಂಚಾಯತ್ ಮಾಜಿ ಸದಸ್ಯ ರಾಜಶೇಖರ್‍ಮೂರ್ತಿ ಮಾತನಾಡಿ, ಹನೂರು ಪಟ್ಟಣದ ಮುಖ್ಯ ರಸ್ತೆಯಲ್ಲಿ ನಿರಂತರ ಜ್ಯೋತಿ ಸೌಲಭ್ಯಗಳನ್ನು ಒದಗಿಸುವ ಸಮಯದಲ್ಲಿ ಹಳೆಯ ವಿದ್ಯುತ್ ಕಂಬಗಳನ್ನು ತೆಗೆಯದೆ ಹೂಸ ಕಂಬಗಳನ್ನು ಹಾಕಿದ್ದಾರೆ .ಇದರಿಂದ ಸಂಚಾರಕ್ಕೆ ಅಡಚಣೆಯಾಗಿ ಸಂಚಾರ ಅಸ್ತವ್ಯಸ್ತೆಯಿಂದ ಅಪಘಾತಕ್ಕೆ ಆಹ್ವಾನ ಮಾಡಿಕೂಟ್ಟಿದೆ. ವಿದ್ಯತ್ ಪ್ರವರ್ತಕಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಟ್ರಾನ್ಸ್ ಪಾರ್ಮರ್‍ಗಳಲ್ಲಿ ನೀರು ಸೋರಿಕೆಯಾಗುತ್ತಿದೆ ಹಾಗೂ ಉಪವಿಭಾಗಗಳಲ್ಲಿ ತಾಂತ್ರಿಕ ಅಧಿಕಾರಿಗಳಲ್ಲಿದೆ ನಂತರದ ದರ್ಜೆಯ ಅಧಿಕಾರಿಗಳು ಮೇಷ್ಟ್ರಿ ,ಮೀಟರ್‍ರೆಡರ್ಸ್‍ಗಳನ್ನು ಕಾರ್ಯ ಜವಬ್ದಾರಿ ಕೂಟ್ಟಿರುವುದರಿಂದ ಇವರಿಗೆ ತಾಂತ್ರಿಕ ನೈಪುಣ್ಯತೆ ಇಲ್ಲದ ಕಾರಣದಿಂದ ಕೆಲಸ ಕಾರ್ಯಗಳು ವಿಳಂಭವಾಗುತ್ತಿದ್ದು ಎಂದು ದೂರಿದರು . 

ರೈತ ಮುಖಂಡ ಚಂಗಡಿ ಕರಿಯಪ್ಪ ಮಾತಾನಾಡಿ, ಕೊಂಬದಿಕ್ಕಿಯ ಕಾಡಂಚಿನ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವು ಒಂದೇ ಟ್ರಾನ್ಸಪರಂ ಇದ್ದು ಇದರಿಂದ ಹತ್ತು ನೀರಿನ ಪಂಪ ಸೆಟ್ ಇರುವುದರಿಂದ ವಿದ್ಯುತ್ ಬಳಕೆ ಸಾಲುತ್ತಿಲ್ಲ ಹಾಗಾಗಿ ಹೆಚ್ಚುವರಿ ಟ್ರಾನ್ಸ್ ಫಾರಂ ಅಳವಡಿಸುವಂತೆ ಕೋರಿದರು.

ಕಾಡಂಚಿನ ಗ್ರಾಮಗಳಿಗೆ ನಿರಂತರ ಜ್ಯೋತಿಯ ಸೌಲಭ್ಯವಿಲ್ಲದೆ ಕತ್ತಲಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ಉಂಟಾಗಿದೆ. ಕೌದಳ್ಳಿ ಗ್ರಾಮದ ಹೋಬಳಿ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇದರಿಂದ ಶಾಲೆಗೆ ವಿದ್ಯುತ್ ಇಲ್ಲದೆ ಮಕ್ಕಳಿಗೆ ತೊಂದರೆ ಉಂಟಾಗುತ್ತಿದೆ ಇದರಿಂದ ನಿರಂತರ ವಿದ್ಯುತ್ ವ್ಯವಸ್ಥೆಯ ಕಲ್ಪಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಇಒ ವಿಜಯ್‍ ಕುಮಾರ್,  ಕಾರ್ಯನಿರ್ವಾಹಣಾಧಿಕಾರಿ ತಾರಾ, ಎಇಇ ದೀಪಾಗಾಂಧಿ, ಕರವೇ ಸ್ವಾಭಿಮಾನಿ ಅಧ್ಯಕ್ಷ ವಿನೋದ್, ರೈತ ಮುಖಂಡರು ಹಾಗೂ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News