ಕಡೂರಿನ ಗೊಲ್ಲರಹಟ್ಟಿಯಲ್ಲಿ ಲಕ್ಷ್ಮೀಹೆಬ್ಬಾಳ್ಕರ್ ಗ್ರಾಮವಾಸ್ತವ್ಯ

Update: 2017-11-19 12:44 GMT

ಕಡೂರು, ನ.19: ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಲ್ಕೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದರು.

ಕಲ್ಕೆರೆ ಗೊಲ್ಲರಹಟ್ಟಿ ಗ್ರಾಮದ ರಂಗಮ್ಮ ರೇವಣ್ಣ ಗೊಲ್ಲರ ಸುಮುದಾಯದವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. ನಂತರ ಗ್ರಾಮದ ಮುಖಂಡರ ಜತೆ ಸಭೆ ನಡೆಸಿ, ಗೊಲ್ಲರ ಸಮುದಾಯದ ಜನರ ಸಮಸ್ಯೆಗಳನ್ನು ಆಲಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಅವರ ಅನಿಷ್ಠ ಪದ್ಧತಿಯಾದಂತಹ ಋತುಮತಿಯಾದ ಸಮಯದಲ್ಲಿ ಹಾಗೂ ಬಾಣಂತಿಯಾದಾಗ ಊರಿನಿಂದ ಹೊರ ಇಡುವ ಮೌಢ್ಯ ಆಚರಣೆಯನ್ನ ಕೈಬಿಡಬೇಕು ಎಂದು ಗ್ರಾಮಸ್ಥರರಲ್ಲಿ ಮನವಿ ಮಾಡಿಕೊಂಡರು.

 ಊರಿನ ಯುವಕರು ವಿದ್ಯಾವಂತರಾಗಿದ್ದು ಈತರಹದ ಅನಿಷ್ಟ ಪದ್ದತಿಯ ಬಗ್ಗೆ ಹಿರಿಯರಲ್ಲಿ ಅರಿವು ಮೂಡಿಸುವಂತೆ ತಾಕೀತು ಮಾಡಿದರು.

ನಂತರ ಗ್ರಾಮದ ಜನಪದ ಕಲಾವಿದರಾಂತಹ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಾರದಮ್ಮ ಸಹೋದರಿಯರನನು ಗೌರವಿಸಿ ಸನ್ಮಾನಿಸಿದರು.

 ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆ ಕಲ್ಪಿಸಿ ಸಾರ್ವಜನಿರೊಂದಿಗೆ ಸರತಿ ಸಾಲಿನಲ್ಲಿ ಕುಳಿತು ಊಟ ಸೇವಿಸಿ ನಂತರ  ರಂಗಮ್ಮ ರೇವಣ್ಣ ದಂಪತಿ ಮನೆಯಲ್ಲಿ ಮಲಗಿದರು. ಗ್ರಾಮ ವಾಸ್ತವ್ಯಕ್ಕೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವನಮಾಲಾ ಮತ್ತಿತ್ತರು ಸಾಥ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News