ದತ್ತಮಾಲೆ: ಶ್ರೀರಾಮಸೇನೆ ಕಾರ್ಯಕರ್ತರಿಂದ ಚಿಕ್ಕಮಗಳೂರಿನಲ್ಲಿ ಶೋಭಯಾತ್ರೆ

Update: 2017-11-19 12:58 GMT

ಚಿಕ್ಕಮಗಳೂರು, ನ.19:ಶ್ರೀರಾಮಸೇನೆ ಹಮ್ಮಿಕೊಂಡಿರುವ ದತ್ತಮಾಲಭಿಯಾನದ ಅಂಗವಾಗಿ ನಗರದಲ್ಲಿ ಶೋಭಯಾತ್ರೆಗೆ ಚಾಲನೆ ನೀಡಲಾಯಿತು.
ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆಸಲ್ಲಿಸಿದ ನಾಗಸಾಧುಗಳು ಮತ್ತು ಶ್ರೀ ರಾಮಸೇನೆಯ ರಾಷ್ಟ್ರಧ್ಯಕ್ಷ ಪ್ರಮೋದ್ ಮುತಾಲಿಕ್ ನಂತರ ರಥದಲ್ಲಿ ಕೂರಿಸಿದ ದತ್ತಾನ ವಿಗ್ರಹಕ್ಕೆ ಪೂಜೆಯನ್ನು ಸಲ್ಲಿಸಿ ಪುಷ್ವರ್ಚನೆ ಮಾಡುವುದರ ಮೂಲಕ ಶೋಭಯಾತ್ರೆಗೆ ಚಾಲನೆ ನೀಡಲಾಯಿತು.

ಶ್ರೀ ರಾಮ ಸೇನೆ ಹಮ್ಮಿಕೊಂಡಿರುವ ದತ್ತಮಾಲಾಶೋಭಯಾತ್ರೆಯಲ್ಲಿ 9 ಕ್ಕೂ ಹೆಚ್ಚು ನಾಗಸಾಧುಗಳು ಭಾಗವಹಿಸಿನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿದರು.ಅಯೋದ್ಯೆಯ ಅಖಾಡದಿಂದ ಬಂದಿರುವನಾಗಸಾಧುಗಳು ಈ ಭಾರೀ ವಿಶೇಷ ಸೂಚನೆ ನೀಡಲಿದ್ದು,ನಗರದ ಬೋಳು ರಾಮೇಶ್ವರ ದೇವಾಸ್ಥಾನದಲ್ಲಿ ಧರ್ಮಸಭೆಯಲ್ಲಿ ಎಲ್ಲಾ ನಾಗಸಾಧುಗಳು ಭಾಗವಹಿಸಿದ್ದರು. 

ಈ ಸಮಯದಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಮಾತನಾಡಿ, ಬಾಬಾನುಡಾನ್ ಗಿರಿಯ ವಿವಾದಿತ ಪ್ರಕರಣವು ಈಗ ರಾಜ್ಯ ಸರ್ಕಾರದ ಅಂಗಳದಲ್ಲಿದೆ. ಇದು ರಾಜ್ಯ ಸರ್ಕಾರ ಬಗೆಹರಿಸಬೇಕು.ಸಂಪೂರ್ಣ ಪೀಠವು ಹಿಂದೂಗಳ ಪೀಠ ಆಗಬೇಕು. ಮುಸ್ಲಿಮರಿಗೆ ಒಂದು ಇಂಚು ಕೂಡ ದತ್ತಪೀಠದ ಜಾಗ ಕೊಡುವುದಿಲ್ಲ.ಅವರ ಪ್ರಾಚೀನ ಸ್ಥಳವಾದ ನಾಗೇನಹಳ್ಳಿಗೆ ಅವರ ದರ್ಗಾವನ್ನುಸ್ಥಳಾಂತರ ಮಾಡಬೇಕು.ಇಲ್ಲದಿದ್ದರೇ ಹೋರಾಟದ ಎಚ್ಚರಿಕೆ ಮಾಡಲಾಗುವುದು ಎಂದು ಹೇಳಿದರು.

ಕಾಮಧೇನು ಗಣಪತಿ ದೇವಸ್ಥಾನದಿಂದಾ ಹೋರಟ ಶೋಭಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಎಂ.ಜಿ.ರಸ್ತೆ ಮೂಲಕ ನೇರವಾಗಿ ಭೋಳುರಾಮೇಶ್ವರ ದೇವಸ್ಥಾನ ಪ್ರವೇಶ ಮಾಡಿದರು.ಈ ವೇಳೆ ಮಂಗಳೂರು,ಶಿವಮೊಗ್ಗ,ಉತ್ತರ ಕನ್ನಡ,ಬೆಳಗಾಂ,ಹುಬ್ಬಳ್ಳಿ,ಧಾರವಾಡ ಜಿಲ್ಲೆಗಳಿಂದ ಸುಮಾರು1 ಸಾವಿರಕ್ಕೂ ಅಧಿಕ ಶ್ರೀ ರಾಮಸೇನೆ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News