ಅಪಾಪ್ತ ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ : ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲು
ಸುಂಟಿಕೊಪ್ಪ,ನ.19:ಅಪಾಪ್ತ ಶಾಲಾ ವಿದ್ಯಾರ್ಥಿನಿಯರನ್ನು ಪುಸಲಾಯಿಸಿ ಆಟೋ ರಿಕ್ಷಾದಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿ ಸಂಜೆ ಕತ್ತಲಲ್ಲಿ ನಿರ್ಜನ ಪ್ರದೇಶದಲ್ಲಿ ಬಾಲಕಿಯರನ್ನು ಬಿಟ್ಟು ಪರಾರಿಯಾದ ಆಟೋ ಚಾಲಕನ ವಿರುದ್ಧ ಪೋಕ್ಸೊ ಕಾಯ್ದೆಯಾಡಿ ಮೊಕದ್ದಮೆ ದಾಖಲಾಗಿದೆ.
ಸುಂಟಿಕೊಪ್ಪದ ಶಾಲೆಗೆ ಬರುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಪರಿಚಯ ಮಾಡಿಕೊಂಡ ಬಾಳೆಕಾಡಿನ ಆಟೋ ಚಾಲಕ ಪ್ರಕಾಶ್ ಎಂಬಾತ ಈ ಇಬ್ಬರು ವಿದ್ಯಾರ್ಥಿನಿಯರನ್ನು ಪುಲಾಯಿಸಿ ಸಂಜೆ ವೇಳೆ ಆಟೋರಿಕ್ಷಾದಲ್ಲಿ ಕುಳ್ಳಿರಿಸಿ ಆನೆಕಾಡು ಅರಣ್ಯ ಪ್ರದೇಶ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಎನ್ನಲಾಗಿದೆ. ಆನಂತರ ಈ ವಿದ್ಯಾರ್ಥಿನಿಯರನ್ನು ದಾರಿ ಬಿಟ್ಟು ಪರಾರಿಯಾಗಿದ್ದಾನೆ.
ಸುಂಟಿಕೊಪ್ಪ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಬಳಿ ಸಂಜೆ ವೇಳೆ ವಾಹನದಲ್ಲಿ ತೆರುಳುತ್ತಿದ್ದಾಗ ಅಪಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಚಲನ ವಲನ ಗಮನಿಸಿ ವಿಚಾರಿಸಿದಾಗ ತಬ್ಬಿಬ್ಬಾಗದ ವಿದ್ಯಾರ್ಥಿಗಳು ಸರಿಯಾಗಿ ಉತ್ತರಿಸದಿದ್ದಾಗ ಠಾಣೆಗೆ ಕರೆತಂದು ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಅಲ್ಲದೆ ಆಟೋರಿಕ್ಷಾ ಚಾಲಕ ಪ್ರಕಾಶ್ ಲೈಂಗಿಕ ಕಿರುಕುಳ ನೀಡಿರುವುದನ್ನು ಪೋಷಕರು ಹಾಗೂ ಪೊಲೀಸರಿಗೆ ಧೃಢಪಡಿಸಿದ ಮೇಲೆ ಚಾಲಕ ಪ್ರಕಾಶ್ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಪ್ರಕಾಶ ರಿಕ್ಷಾ ಸಮೇತ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.