×
Ad

ಬೈಕ್ ಗೆ ಲಾರಿ ನಡುವೆ ಢಿಕ್ಕಿ:ಇಬ್ಬರು ಮೃತ್ಯು

Update: 2017-11-19 20:58 IST

ತುಮಕೂರು,ನ.19:ನಿಂತಿದ್ದ ಬೈಕ್‍ಗೆ ಹಿಂದಿನಿಂದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಗರದ ಭೀಮಸಂದ್ರ ಬಳಿ ನಡೆದಿದೆ.

ಮೃತರನ್ನು ಗುಬ್ಬಿ ತಾಲೂಕು ಅಡಗೂರಿನ ಸಿದ್ದರಾಮಣ್ಣ(30) ಮತ್ತು ನರಸಿಂಹಮೂರ್ತಿ(28) ಎಂದು ಗುರುತಿಸಲಾಗಿದೆ. ಮೃತರು ಒಂದು ಮನೆತನಕ್ಕೆ ಸೇರಿದ ಅಣ್ಣತವ್ಮ್ಮಂದಿರ ಮಕ್ಕಳಾಗಿದ್ದಾರೆ.ಹಿರೇಹಳ್ಳಿಯ ಬಳಿ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಊರಿಗೆ ಹೋಗುವ ವಾಗ ಈ ಘಟನೆ ನೆಡೆದಿದೆ
ನಗರ ಠಾಣಾ ವ್ಯಾಪ್ತಿ ಘಟನೆ ಸ್ಥಳಕ್ಕೆ ತಿಲಕ್ ಪಾರ್ಕ್ ವೃತ್ತನೀರಿಕ್ಷಕರಾದ ರಾಧಾಕೃಷ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News