ಪೊನ್ನಂಪೇಟೆ ಹಾಗೂ ಕಾವೇರಿ ತಾಲೂಕು ಘೋಷಣೆ : ಬಹಿರಂಗ ಅಧಿವೇಶನದಲ್ಲಿ ನಿರ್ಣಯ

Update: 2017-11-19 17:41 GMT

ಮಡಿಕೇರಿ,ನ.19 : ಕೊಡಗು ಜಿಲ್ಲೆಯ ಕುಶಾಲನಗರ ಹಾಗೂ ಪೊನ್ನಂಪೇಟೆಯನ್ನು ತಾಲ್ಲೂಕುವನ್ನಾಗಿ ರಚಿಸಬೇಕೆಂಬ ನಿರ್ಣಯವನ್ನು 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.

 ಪೊನ್ನಂಪೇಟೆ ಪ್ರಾಥಮಿಕ ಶಾಲಾ ಮೈದಾನದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ವೇದಿಕೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕಸಾಪ ಕಾರ್ಯದರ್ಶಿ ಡಾ.ಮೇಚೀರ ಸುಭಾಷ್ ನಾಣಯ್ಯ ನಿರ್ಣಯ ಮಂಡನೆ ಮಾಡಿದರು. 

ಜಿಲ್ಲೆಯ ಅಂಗಡಿಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕು, ಶಾಲಾ ಕಾಲೇಜುಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಮುಖ್ಯಭಾಷೆ ಮಾಡಬೇಕು, ಕೊಡಗಿನ ಗಡಿಭಾಗಗಳಲ್ಲಿರುವ ಶಾಲೆಗಳನ್ನು ಕನ್ನಡ ಮಾಧ್ಯಮವನ್ನಾಗಿ ಪರಿವರ್ತಿಸಬೇಕು, ಗಡಿಭಾಗದ ಶಾಲೆಯನ್ನು ಉಳಿಸಬೇಕು, ಜಿಲ್ಲೆಯ ಲೇಖಕರ ಪುಸ್ತಕಗಳ ಪ್ರಕಟಣೆಗೆ ಸರ್ಕಾರ ಕೈಜೋಡಿಸಬೇಕು, ಜಿಲ್ಲೆಯ ಪತ್ರಿಕೆಗಳಿಗೆ ಸಹಾಯ ಧನ ಹೆಚ್ಚಿಸಬೇಕು, ಜಮ್ಮ ಜಾಗವನ್ನು ಜಮ್ಮ ಆಸ್ತಿಯ ಮಾರಾಟಕ್ಕೆ ನಿರ್ಬಂದವೇರಬೇಕು, ನದಿ ರಕ್ಷಣೆ ಮಾಡಬೇಕು, ಜಿಲ್ಲೆಯ ಯಾವುದೇ ಪ್ರದೇಶಗಳನ್ನು ಹುಲಿ ಸಂರಕ್ಷಣಾ ತಾಣ ಎಂದು ಘೋಷಿಸಬಾರದು, ಜಿಲ್ಲೆಯ ಅಪಾಯಕಾರಿ ಜಲಪಾತಗಳಿಗೆ ನಾಮಫಲಕ ಅಳವಡಿಸಬೇಕು ಎಂಬ ನಿರ್ಣಯವನ್ನು ಮಂಡನೆ ಮಾಡಲಾಯಿತು. ಸಭೆ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿತು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
12ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.  ಹಿರಿಯ ಪತ್ರಕರ್ತ ಜಿ.ರಾಜೇಂದ್ರ, ಸಾಹಿತ್ಯ ಕ್ಷೇತ್ರದ ಚೇಂದ್ರಿಮಾಡ ಮುತ್ತಪ್ಪ, ಒಲಂಪಿಯನ್ ವಿ.ಆರ್ ರಘುನಾಥ್, ಶಿಕ್ಷಣ ಕ್ಷೇತ್ರದಲ್ಲಿ ಪುನೀತ್ ಕುಟ್ಟಯ್ಯ, ರಾಜ್ಯ ಪ್ರಶಸ್ತಿ ಪುರಸ್ಕೃತ ಕೃಷಿಕ ಸೋಮೆಯಂಗಡ ಗಣೇಶ್ ತಿಮ್ಮಯ್ಯ, ಸಮಾಜ ಸೇವಕ ಉಂಬಾಯಿ, ಶಿಕ್ಷಣ ಕ್ಷೇತ್ರದಲ್ಲಿ ಉಷಾರಾಣಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಯತಿರಾಜ್, ಮಹಿಳಾ ಸಬಲೀಕರಣದಲ್ಲಿ ಶಾಂತಿ ಅಚ್ಚಪ್ಪ, ನಾಟ್ಯ ಕ್ಷೇತ್ರದಲ್ಲಿ ಕಾರ್ತಿಕ್ ಶಣೈ, ಶಿಲ್ಪಕಲೆ ಕ್ಷೇತ್ರದಲ್ಲಿ ಕಾವೇರಪ್ಪ, ಚಲನಚಿತ್ರ ಕ್ಷೇತ್ರದಲ್ಲಿ ಫಯಾಜ್ ಖಾನ್, ಛಾಯಗ್ರಹಣ ಕ್ಷೇತ್ರದಲ್ಲಿ ಶಿವಣ್ಣ, ಮಾಧ್ಯಮ ಕ್ಷೇತ್ರದಲ್ಲಿ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜನಪದ ಕ್ಷೇತ್ರದಲ್ಲಿ ಬೆಸೂರು ಶಾಂತಪ್ಪ, ಪರ್ವತರೋಹಣ ಮಾಡಿದ ಜಿಲ್ಲೆಯ ಬಿ.ವೈ.ಸಂಚಿತ್ ಅವರನ್ನು ಸನ್ಮಾನಿಸಲಾಯಿತು.

ಸಮ್ಮೇಳನಾಧ್ಯಕ್ಷೆ ಸುಬ್ಬಮ್ಮ ತಿಮ್ಮಯ್ಯ, ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಶ್ರೀ ಭೋಧಸ್ವರೂಪಾನಂದಾಜೀ ಮಹರಾಜ್,  ರಾಜ್ಯ ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಕೆಡಿಸಿಸಿ ಬ್ಯಾಂಕ್ ಸದಸ್ಯ ರಘು ನಾಣಯ್ಯ, ಪ.ಪಂ ಸದಸ್ಯೆ ದೇಚಮ್ಮ ಕಾಳಪ್ಪ, ಎಫ್‍ಕೆಸಿಸಿ ಉಪಾಧ್ಯಕ್ಷ ಗಿರೀಶ್ ಗಣಪತಿ, ಸಮಾಜ ಸೇವಕ ಮತ್ರಂಡ ದಿಲ್ಲು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News