ನೀರಿನ ತೊಟ್ಟಿಗೆ ಬಿದ್ದು ಮಹಿಳೆ ಮೃತ್ಯು: ಕೊಲೆ ಆರೋಪ
Update: 2017-11-20 18:49 IST
ದಾವಣಗೆರೆ, ನ.20: ವಿವಾಹಿತ ಮಹಿಳೆಯೊಬ್ಬರು ನೀರಿನ ತೊಟ್ಟಿಯಲ್ಲಿ ಅನುಮಾನಾಸ್ಪದವಾಗಿ ಬಿದ್ದು ಮೃತಪಟ್ಟಿದ್ದು, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಮೃತಳ ಪಾಲಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಲ್ಲಿನ ವಿಜಯ ನಗರದ ವಾಸಿ ಕಾಜಲ್(23 ವರ್ಷ) ಮೃತಪಟ್ಟವರೆಂದು ಗುರುತಿಸಲಾಗಿದೆ.
ಸಾರಿಗೆ ಇಲಾಖೆಯಲ್ಲಿ ನೌಕರಿ ಮಾಡುವ ಸಮೀವುಲ್ಲಾ ಜತೆಗೆ ಕಾಜಲ್‍ಳನ್ನು 5 ವರ್ಷದ ಹಿಂದಷ್ಟೇ ಮದುವೆ ಮಾಡಿಕೊಡಲಾಗಿತ್ತು. ಸಮೀವುಲ್ಲಾ-ಕಾಜಲ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆ ವೇಳೆ ಸಮೀವುಲ್ಲಾ ವರದಕ್ಷಿಣೆಯಾಗಿ ಒಂದು ಸೈಟ್, ಒಡವೆ ನೀಡುವಂತೆ ಬೇಡಿಕೆ ಇಟ್ಟಿದ್ದನು. ಆದರೆ, ಕಾಜಲ್ ಪಾಲಕರು ಆತನ ಬೇಡಿಕೆ ಈಡೇರಿಸಿರಲಿಲ್ಲವೆನ್ನಲಾಗಿದೆ. ಇದರಿಂದ ಆಕೆಗೆ ನಿತ್ಯವೂ ಕಿರುಕುಳ ನೀಡುತ್ತಿದ್ದ. ಮನೆ ಮುಂದಿನ ತೊಟ್ಟಿಯಲ್ಲಿ ಕಾಜಲ್ ಕೊಲೆ ಮಾಡಿ, ಹಾಕಲಾಗಿದೆ ಎಂದು ಕುಟುಂಬ ವರ್ಗ ಆರೋಪಿಸಿ, ಮೃತ ಕಾಜಲ್‍ಳ ಕುಟುಂಬ ವರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.