ಬೈಕ್ ಗೆ ಲಾರಿ ಢಿಕ್ಕಿ: ಬೈಕ್ ಸವಾರ ಮೃತ್ಯು
Update: 2017-11-20 18:55 IST
ದಾವಣಗೆರೆ, ನ.20: ಲಾರಿಯೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲೂಕಿ ಬೆಂಕಿಕೆರೆ ಗ್ರಾಮದ ಸಮೀಪದಲ್ಲಿರುವ ಕರಿಯಮ್ಮ ದೇವಸ್ಥಾನದ ಬಳಿ ನಡೆದಿದೆ.
ಬೆಂಕಿಕೆರೆ ಗ್ರಾಮದ ಮಂಜುನಾಥ್ (30) ಮೃತಪಟ್ಟವರೆಂದು ಗುರುತಿಸಲಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಂಪತ್ ಕುಮಾರ್ (23), ಸಿದ್ದಪ್ಪ (24) ಅವರನ್ನು ಚನ್ನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜುನಾಥ್ ಅವರು ಬೆಂಕಿ ಕೆರೆಯಿಂದ ಶಬರಿಮಲೈಗೆ ಹೊರಟಿದ್ದ ವೇಳೆ ಶಿವಮೊಗ್ಗ ಮಾರ್ಗವಾಗಿ ಕಟ್ಟಿಗೆ ಹೇರಿಕೊಂಡು ಬರುತ್ತಿದ್ದ ಲಾರಿ ಢಿಕ್ಕಿಯಾಗಿದೆ ಎನ್ನಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಚನ್ನಗಿರಿ ಸಿಪಿಪಿ ಗಜೇಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.